ಜಿಲ್ಲೆ

ಆನ್ ಲೈನ್ ನಲ್ಲಿ ಹಣ ಹೂಡಿ 70 ಲಕ್ಷ ಕಳೆದುಕೊಂಡ ವ್ಯಾಪಾರಿ

Uttara Kannada - Subash Hegde

ಕಾರವಾರ:ಹಣ ದ್ವಿಗುಣ ಮಾಡಿಕೊಳ್ಳುವ ಆಸೆಯಲ್ಲಿ ಆನ್‌ಲೈನ್ ಹೂಡಿಕೆ ಮಾಡಿದ ವ್ಯಾಪಾರಿಯೊಬ್ಬ 70 ಲಕ್ಷ ರೂ. ಕಳೆದುಕೊಂಡ ಘಟನೆ ಮುಂಡಗೋಡಿನಲ್ಲಿ ನಡೆದಿದೆ. ಈ ಸಂಬಂಧ ನಗರದ ಸಿಇಎನ್ ಅಪರಾಧಗಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟೆಲಿಗ್ರಾಂನಲ್ಲಿ ಬಂದ ಸಂದೇ ನಂಬಿ ಸೂಪರ್ ವಿಐಪಿ ಟ್ರೇಡಿಂಗ್ ಎಂಬ ಗ್ರೂಪ್‌ನಲ್ಲಿ ನ್ನು ಸೆ.10 ರಂದು ಸೇರಿಕೊಂಡಿದ್ದ ವ್ಯಾಪಾರಿ ಅಲ್ಲಿ 70 ಲಕ್ಷ ರೂ. ಹೂಡಿಕೆ ಮಾಡಿದ್ದರು. ಅದನ್ನು ಅಮೆರಿಕನ್ ಡಾಲರ್‌ಗೆ ಪರಿವರ್ತಿಸಿ ಹೂಡಿಕೆ ಮಾಡಿದ್ದರು. ಸ. 13 ರಂದು ಅವರ ಇನ್ ಬಾಕ್ಸ್ನಲ್ಲಿ 2.83 ಕೋಟಿ ರೂ. ತೋರಿಸಲಾರಂಭಿಸಿತ್ತು. ಹಣವನ್ನು ತೆಗೆಯಲು ವ್ಯಾಪಾರಿ ಮುಂದಾದಾಗ ಅದರ ಶೇ. 30 ರಷ್ಟು ಟ್ಯಾಕ್ಸ್ ಅಂದಾಜು 82 ಸಾವಿರ ಆಗಲಿದೆ ಎಂದು ಹೇಳಿದ್ದರು. ಅನುಮಾನ ಬಂದ ವ್ಯಾಪಾರಿ ಹೆಚ್ಚು ವಿಚಾರಿಸಲು ಹೋದಾಗ ಗ್ರೂಪ್‌ನಲ್ಲಿ ಆತನನ್ನು ಬ್ಲಾಕ್ ಮಾಡಲಾಗಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.