ನೆಲಮಂಗಲ: ಉದ್ಯೋಗದ ಸಂಬಂಧ ಮಾತುಕತೆಗೆಂದು ಯುವತಿಯೊಬ್ಬಳಿಗೆ ಬರಹೇಳಿದ ಯುವಕನೊಬ್ಬ, ಆಕೆಯ ಮೇಲೆ ಕಾರೊಳಗೇ ಅತ್ಯಾಚಾರ ಎಸಗಿದ ಪ್ರಕರಣವೊಂದು ನಡೆದಿದೆ.
ಪ್ರಕರಣ ಸಂಬಂಧ ಯುವತಿಯು ಮಾದನಾಯಕನಹಳ್ಳಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಆರೋಪಿಯ ಮೇಲೆ ಕೇಸು ದಾಖಲಾಗಿದೆ. 25 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಹರ್ಷ ಗೌಡ ಎಂಬಾತನ ಮೇಲೆ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಹೆಣ್ಣೂರಲ್ಲೇ ಹೆಣ್ಣಿಗೆ ಅನ್ಯಾಯ!; ದೂರು ನೀಡಲು ಹೋದರೆ ಲಂಚ ಕೇಳಿದ, ಮಂಚಕ್ಕೂ ಕರೆದ ಪೊಲೀಸ್ ಇನ್ಸ್ಪೆಕ್ಟರ್…
ಕೆಲಸದ ವಿಷಯವಾಗಿ ಜ. 16ರಂದು ಹರ್ಷ ಆ ಯುವತಿಗೆ ಬರಲು ಹೇಳಿದ್ದ. ನಂತರ ಮಾಕಳಿ ಸಮೀಪದ ವೀರೂಸ್ ಢಾಬಾ ಆ್ಯಂಡ್ ರೆಸ್ಟೋರೆಂಟ್ ಬಳಿ ಕರೆದೊಯ್ದು, ಅಲ್ಲಿಗೆ ಸಮೀಪದ ನಿರ್ಜನ ಪ್ರದೇಶದಲ್ಲಿ ಕಾರೊಳಗೇ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.