ಜಿಲ್ಲೆ

ಏಕಾಏಕಿ ಹೊತ್ತಿ ಉರಿದ ಡೀಸೆಲ್​ ಟ್ಯಾಂಕರ್​: ಓರ್ವ ಸಜೀವ ದಹನ

mahalakshmihm

ವಿಜಯನಗರ: ರಸ್ತೆ ಬದಿಯಲ್ಲಿ ನಿಂತಿದ್ದ ಡೀಸೆಲ್​ ಟ್ಯಾಂಕರ್​ ಏಕಾಏಕಿ ಹೊತ್ತಿ ಉರಿದ ಪರಿಣಾಮ ಓರ್ವ ಸಜೀವ ದಹನಗೊಂಡಿರುವ ಘಟನೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಬೆಂಡಿಗೇರಿ ರಸ್ತೆಯ ಬಳಿ ನಡೆದಿದೆ.

ರಸ್ತೆಯ ಪಕ್ಕದಲ್ಲೇ ಈ ವಾಹನ ನಿಲ್ಲಿಸಲಾಗಿತ್ತು. ಇದೇ ವೇಳೆ ಟ್ಯಾಂಕರ್​ ಹೊತ್ತಿ ಉರಿದಿದೆ. ವಾಹನದಲ್ಲೇ ಇದ್ದ ವ್ಯಕ್ತಿಯೋರ್ವ ತಪ್ಪಿಸಿಕೊಳ್ಳುವ ಮುನ್ನವೇ ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಸಾವನ್ನಪ್ಪಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸುವ ಮುನ್ನವೇ ಸಂಪೂರ್ಣ ವಾಹನ ಸುಟ್ಟು ಕರಕಲಾಗಿತ್ತು. ಘಟನೆಗೆ ತಾಂತ್ರಿಕ ದೋಷವೇ ಕಾರಣ ಎನ್ನಲಾಗಿದೆ. ಸ್ಥಳಕ್ಕೆ ಹರಪನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. (ದಿಗ್ವಿಜಯ ನ್ಯೂಸ್​)