ಜಿಲ್ಲೆ

ಸಾಮಾಜಿಕ ಸಾಮರಸ್ಯ ಬಿಂಬಿಸುವ ಹಬ್ಬ : ಮಂಜೇಶ್ವರ ಲೈಬ್ರರಿ ಕೌನ್ಸಿಲ್ ಉಪಾಧ್ಯಕ್ಷ ಸುಧಾಕರ ಬಣ್ಣನೆ

ಸೌಮ್ಯ ಆರ್

ಪೆರ್ಲ: ಓಣಂ ಆಚರಣೆ ಸಾಮಾಜಿಕ ಸಾಮರಸ್ಯ ಬಿಂಬಿಸುವ ಹಬ್ಬವಾಗಿದ್ದು, ನಾಡಿನ ಸಮೃದ್ಧಿಯನ್ನು ಸೂಚಿಸುತ್ತದೆ ಎಂದು ಮಂಜೇಶ್ವರ ಲೈಬ್ರರಿ ಕೌನ್ಸಿಲ್ ಉಪಾಧ್ಯಕ್ಷ ಸುಧಾಕರ ಹೇಳಿದರು.

ನಲ್ಕ ಗ್ರಂಥಾಲಯದಲ್ಲಿ ನಮ್ಮೂರ ಓಣಂ ಉತ್ಸವ ಉದ್ಘಾಟಿಸಿ ಮಾತನಾಡುತ್ತಿದ್ದರು.

ಮುದ್ದೇನಹಳ್ಳಿ ಸತ್ಯಸಾಯಿ ಸಂಸ್ಥೆಗಳ ಉಪನ್ಯಾಸಕ ಕಬೀರ್ ಅಡ್ಕಸ್ಥಳ ಮಾತನಾಡಿ, ವಿವಿಧತೆಯಲ್ಲಿ ಏಕತೆಯನ್ನು ಕಾಪಾಡಿ ‘ವಸುದೈವ ಕುಟುಂಬಕಂ’ ಎಂಬ ಸತ್ಯ ಸಾಕ್ಷಾತ್ಕಾರವಾಗಲು ಹಬ್ಬಗಳ ಆಚರಣೆ ಮುಖ್ಯ ಪಾತ್ರ ವಹಿಸುತ್ತದೆ ಎಂದರು.

ನಿವೃತ್ತ ಶಿಕ್ಷಕಿ ಪಾರ್ವತಿ ಕೈಲಾಸ, ಉಪನ್ಯಾಸಕ ಕ್ಯಾಪ್ಟನ್ ಈಶ್ವರ ನಾಯಕ್ ಅವರನ್ನು ಗೌರವಿಸಲಾಯಿತು. ಎಣ್ಮಕಜೆ ಗ್ರಾಪಂ ಸದಸ್ಯೆ ಆಶಾಲತಾ, ಮುಖ್ಯ ಶಿಕ್ಷಕ ಶ್ರೀಪತಿ ಎನ್., ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ವಲಯ ನಲ್ಕ ಒಕ್ಕೂಟ ಅಧ್ಯಕ್ಷ ಶ್ರೀಧರ ಮಣಿಯಾಣಿ ಶುಭಾಶಂಸನೆಗೈದರು. ಶ್ವೇತಾ ಹಾಗೂ ಮಮತಾ ಸನ್ಮಾನಿತರ ಪರಿಚಯ ಮಾಡಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯದರ್ಶಿ ಶಶಿಧರ ವರ್ಮುಡಿ, ವಿನೋದ್, ನಾರಾಯಣ, ಜಗದೀಶ್ ಮೊದಲಾದವರಿದ್ದರು.

ವನಜಾ ಸ್ವಾಗತಿಸಿದರು. ಶಿಕ್ಷಕ ಕಮಲಾಕ್ಷ ನಾಯಕ್ ನಿರೂಪಿಸಿದರು. ನಳಿನಿ ವಂದಿಸಿದರು.