ಜಿಲ್ಲೆ

29ರಂದು ವಧೂವರರ ಅನ್ವೇಷಣಾ ಕಾರ‌್ಯಕ್ರಮ : ಸಂಘದ ಅಧ್ಯಕ್ಷ ಕೆ.ಸಚ್ಚಿದಾನಂದ ಮಾಹಿತಿ

ಸೌಮ್ಯ ಆರ್

ಮೂಲ್ಕಿ: ಕಾರ್ನಾಡು ಗೇರುಕಟ್ಟೆ ಮುಂಡಾಲ (ಎಸ್‌ಸಿ) ಶಿವ ಸಮಾಜ ಸಂಘ ಒಂಬತ್ತು ಮಾಗಣೆಯ 42 ಗ್ರಾಮಗಳ ವ್ಯಾಪ್ತಿಯ ಸಂಘವಾಗಿದ್ದು ಸಾಮಾಜಿಕ ಶೈಕ್ಷಣಿಕ ಮತ್ತು ಧಾರ್ಮಿಕ ಕಾರ್ಯಕ್ರಮ ಚಟುವಟಿಕೆ ನಡೆಸುತ್ತಾ ಬಂದಿದೆ. ಡಿ.29ರಂದು ಸಂಘದಲ್ಲಿ ಮುಂಡಾಲ ಸಮಾಜದ ವಧೂವರರ ಅನ್ವೇಷಣಾ ಕಾರ್ಯಕ್ರಮ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಕೆ.ಸಚ್ಚಿದಾನಂದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈ ಹಿಂದೆ 2018ರಂದು ವಧೂ ವರರ ಅನ್ವೇಷಣಾ ಕಾರ್ಯಕ್ರಮ ಏರ್ಪಡಿಸಿ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಶಿವಮೊಗ್ಗ ಮತ್ತು ಹಾಸನದಿಂದ ನೂರಾರು ಆಸಕ್ತರಿಂದ ಉತ್ತಮ ಪ್ರತಿಕ್ರಿಯೆ ದೊರೆತಿತ್ತು. ಡಿ.29ರಂದು ವಧೂವರರ ಅನ್ವೇಷಣಾ ಕಾರ್ಯಕ್ರಮಕ್ಕೆ ಬರುವ ಆಸಕ್ತರು ಆಧಾರ್ ಕಾರ್ಡ್ ಪಡಿತರ ಚೀಟಿ ಜಾತಿ ಪ್ರಮಾಣ ಪತ್ರದ ಪ್ರತಿ ಮತ್ತು ಪೂರ್ಣ ಪ್ರಮಾಣದ ಭಾವಚಿತ್ರ ನೀಡಿ ನೋಂದಾಯಿಸಬೇಕು. ಮಾಹಿತಿಗೆ 7338161589, 9663760630 ಮೊಬೈಲ್ ಸಂಪರ್ಕಿಸಬೇಕಾಗಿ ವಿನಂತಿಸಿದ್ದಾರೆ.

ಸಂಘದ ಮಾಜಿ ಅಧ್ಯಕ್ಷ ಭಾಸ್ಕರ ಮಾಬಿಯಾನ್, ಮಾಜಿ ಪ್ರಧಾನ ಕಾರ್ಯದರ್ಶಿ ಸುಕುಮಾರ್ ಬಿ., ಸದಸ್ಯರಾದ ಶಯನ್ ಕುಮಾರ್ ಗೋಷ್ಠಿಯಲ್ಲಿದ್ದರು.