ಜಿಲ್ಲೆ

24ರಂದು ದಿ.ಎಂ.ರಾಮಕೃಷ್ಣ ರಾವ್​ ಸಂಸ್ಮರಣೆ

Avinash R

ಮಂಜೇಶ್ವರ: ಮೀಯಪದವು ವಿದ್ಯಾವರ್ಧಕ ಪ್ರೌಢ ಪ್ರಾಥಮಿಕ ಶಾಲೆ ಸಂಚಾಲಕರಾಗಿ, ಅಧ್ಯಾಪಕರಾಗಿ ಮೀಂಜ ಪ್ರದೇಶದ ವಿದ್ಯಾಭ್ಯಾಸ ೇತ್ರದ ಧ್ರುವತಾರೆಯೆನಿಸಿಕೊಂಡಿದ್ದ ದಿ.ಎಂ ರಾಮಕೃಷ್ಣ ರಾವ್​ ಅವರ 19ನೇ ಪುಣ್ಯತಿಥಿಯ ಸಂದರ್ಭ ಸಂಸ್ಮರಣೆ ಹಾಗೂ ಸನ್ಮಾನ ಕಾರ್ಯಕ್ರಮ ಸೆ.24ರಂದು ಶಾಲಾ ರಂಗಮಂಟಪದಲ್ಲಿ ನಡೆಯಲಿದೆ.

ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ರಾಜಗೋಪಾಲ್​ ಅಧ್ಯಕ್ಷತೆ ವಹಿಸುವರು. ಎಸ್​.ವಿ.ವಿ.ಎಚ್​.ಎಸ್​.ಎಸ್​ ಕೊಡ್ಲಮೊಗರು ಶಾಲೆ ನಿವೃತ್ತ ಮುಖ್ಯಶಿಕ್ಷಕ ಐ.ಶಂಕರನಾರಾಯಣ ಭಟ್​ ಉಪಸ್ಥಿತರಿರುವರು. ಶಾಲಾ ಹಳೇ ವಿದ್ಯಾರ್ಥಿ ಹಾಗೂ ನಿವೃತ್ತ ಯೋಧ ಉದಯಕುಮಾರ್​ ಎಂ.ಅವರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಶಾಲಾ ಹಳೇ ವಿದ್ಯಾರ್ಥಿನಿ ಆದಿಶ್ರೀ ಎಸ್​.ಎನ್​.ಅವರಿಗೆ ಅಭಿನಂದನೆ ಕಾರ್ಯಕ್ರಮ ಜರುಗಲಿದೆ ಎಂದು ಶಾಲಾ ಸಂಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.