ಜಿಲ್ಲೆ

17ರಂದು ಸಾಧಕರಿಗೆ ಸನ್ಮಾನ, ಪ್ರಶಸ್ತಿ ಪ್ರದಾನ

Avinash R

ಕಾಸರಗೋಡು: ಗಡಿನಾಡ ಗಾನಕೋಗಿಲೆ ಕಲಾವಿದರ ವೇದಿಕೆ ಬದಿಯಡ್ಕ ಕಾಸರಗೋಡು ಹಾಗೂ ಕೋಲಾರದ ಸ್ವರ್ಣಭೂಮಿ ಫೌಂಡೇಷನ್ ವತಿಯಿಂದ ಗಡಿನಾಡ ಕಾಸರಗೋಡು ಕನ್ನಡ ರಾಜ್ಯೋತ್ಸವ-2024 ಕಾರ್ಯಕ್ರಮ ನ.17ರಂದು ಬದಿಯಡ್ಕ ಸನಿಹದ ಬಾರಡ್ಕದ ’ಆಶ್ರಯ’ದಲ್ಲಿ ಜರುಗಲಿದೆ.

ಬೆಳಗ್ಗೆ 9.30ಕ್ಕೆ ಅಂತಿಮ ಸುತ್ತಿನ ಗಾಯನ ಸ್ಪರ್ಧೆ ನಡೆಯುವುದು. 10.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸಾಹಿತಿ, ಸಮಾಜ ಸೇವಕ ಪ್ರಭಾಕರ ಕಲ್ಲೂರಾಯ ಬನದಗದ್ದೆ ಉದ್ಘಾಟಿಸುವರು. ಕೋಲಾರದ ಸ್ವರ್ಣಭೂಮಿ ಫೌಂಡೇಷನ್ ಅಧ್ಯಕ್ಷ ಬಿ.ಶಿವಕುಮಾರ್ ಅಧ್ಯಕ್ಷತೆ ವಹಿಸುವರು.

ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ, ಪ್ರದೀಪ್ ಕುಮಾರ್ ಕಲ್ಕೂರ, ಎ.ಆರ್.ಸುಬ್ಬಯ್ಯಕಟ್ಟೆ, ಡಾ.ಜನಾರ್ದನ ನಾಯ್ಕ, ಉದ್ಯಮಿ ಬಿ.ವಸಂತ ಪೈ ಬದಿಯಡ್ಕ, ಸಾಹಿತಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಜೆಡ್.ಎ. ಕಯ್ಯರ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಈ ಸಂದರ್ಭ ಸಾಧಕರಿಗೆ ಸನ್ಮಾನ, ಪ್ರಶಸ್ತಿ ಪ್ರದಾನ, ಸಾಂಸ್ಕೃತಿಕ ವೈಭವ, ಗಾಯನ, ನೃತ್ಯ ವೈವಿಧ್ಯ ನಡೆಯುವುದು.