ಮಸ್ಕಿ: ಪಟ್ಟಣದ ಹಳೇ ಬಸ್ ನಿಲ್ದಾಣದ ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ವಿವಿಧ ಸಂಘಟನೆಗಳು ಕ್ರಾಂತಿಕಾರಿ ಹೋರಾಟಗಾರ ಗದ್ದರ್‌ಗೆ ಸೋಮವಾರ ಶ್ರದ್ಧಾಂಜಲಿ ಸಲ್ಲಿಸಿದವು.
ಕರ್ನಾಟಕ ರೈತ ಸಂಘದ ಮುಖಂಡ ಸಂತೋಷ ಹಿರೇದಿನ್ನಿ ಮಾತನಾಡಿ, ಜನಪರ ಹಾಗೂ ಪ್ರಗತಿಪರ ಹೋರಾಟಗಳಿಗೆ ಗದ್ದರ್ ನಮ್ಮೆಲ್ಲರಿಗೆ ಸ್ಪೂರ್ತಿಯಾಗಿದ್ದಾರೆ. ಅವರು ನಮ್ಮನ್ನು ಬಿಟ್ಟು ಅಗಲಿರುವುದು ಹೋರಾಟಗಳಿಗೆ ತುಂಬಲಾರದ ನಷ್ಟವಾಗಿದೆ ಎಂದರು.
ಪ್ರಗತಿಪರ ಸಂಘಟನೆಯ ಮುಖಂಡ ಎಂ.ಅನಿಲ್ ಕುಮಾರ್ ಮಾತನಾಡಿ, ಗದ್ದರ್ ಜನರ ಬದುಕಿನ ಜೊತೆಗೆ ಒಂದು ಸಾಂಸ್ಕೃತಿಕ ಲೋಕವಾಗಿದ್ದರು. ಕಲೆ ಸಾಹಿತ್ಯ ಜನಪರ ಹಾಡುಗಳನ್ನು ಹಾಡುವ ಮೂಲಕ ಜನರನ್ನು ಸಂಘಟಿಸುತ್ತಿದ್ದರು ಎಂದರು.
ಇದನ್ನೂ ಓದಿ: ಅನಾಥವಾದ ಸರ್ಕಾರಿ ಬಾಲಕಿಯರ ಶಾಲೆ
ಪ್ರಮುಖರಾದ ಮಾರುತಿ ಜಿನ್ನಾಪುರ, ವಿಜಯ್ ಬಡಿಗೇರ್, ಎಂ. ಅನಿಲ್ ಕುಮಾರ್, ಚಂದ್ರಶೇಖರ ಕ್ಯಾತ್ನಟ್ಟಿ, ಗಂಗಪ್ಪ ತೋರಣದಿನ್ನಿ, ದೇವರಾಜ್ ಮಡಿವಾಳ, ನಾಗರಾಜ್ ಮೆದಕಿನಾಳ್, ವೆಂಕಟೇಶ್ ನಾಯಕ, ತಿರುಪತಿ ಮಸ್ಕಿ ಇನ್ನಿತರರಿದ್ದರು.