ಜಿಲ್ಲೆ

'ಬಿಜಲಿ'ಗೆ ನೇಮಕ ಮಾಡಿದ ಓಲಾ ಕಂಪನಿ! ಉದ್ಯೋಗ ಗಿಟ್ಟಿಸಿದ ಶ್ವಾನ

ಬೆಂಗಳೂರು: ಕಂಪನಿಯ ಹೆಸರು, ಉತ್ಪನ್ನದ ಮಾರ್ಕೆಟಿಂಗ್​ ಮಾಡಲು ಮಾಲೀಕರು ಹಾಗೂ ಆಡಳಿತ ಸಿಬ್ಬಂದಿ ತರಹೇವಾರಿ ಉಪಕ್ರಮಗಳನ್ನು ಅನುಸರಿಸುತ್ತಾರೆ. ಅದರಲ್ಲಿ ಕೆಲವು ಸಾಮಾನ್ಯ ಎನಿಸಿದರೆ, ಮತ್ತೆ ಕೆಲವು ಆಶ್ಚರ್ಯ ಮೂಡಿಸುತ್ತವೆ. ಇದಕ್ಕೆ ತಾಜಾ ಉದಾಹರಣೆ, ಎಂದರೆ ಓಲಾ ಎಲೆಕ್ಟ್ರಿಕ್​ ಕಂಪನಿ, ಶ್ವಾನವೊಂದನ್ನು ತನ್ನ ಉದ್ಯೋಗಿಯಾಗಿ ನೇಮಕ ಮಾಡಿಕೊಂಡಿದೆ!

ಈ ಬಗ್ಗೆ ಸಂಸ್ಥೆಯ ಸಿಇಒ ಭವೀಶ್​ ಅಗರ್ವಾಲ್​ ತಮ್ಮ ಟ್ವಿಟರ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಓಲಾ ವಾಹನ ಕ್ಷೇತ್ರಕ್ಕೆ ಸಂಬಂಧಿಸಿರುವುದರಿಂದ, ತನ್ನ ನೂತನ ಉದ್ಯೋಗಿಗೆ ಹಿಂದಿಯಲ್ಲಿ "ಬಿಜಲಿ' (ವಿದ್ಯುತ್​) ಎಂದು ನಾಮಕರಣ ಮಾಡಿದೆ. ಒಲಾ ಎಲೆಕ್ಟ್ರಿಕ್​ ವಾಹನವಾಗಿದ್ದರಿಂದ ಈ ಹೆಸರು ಇಡಲಾಗಿದೆ.

ಅಲ್ಲದೆ, ಗುರುತಿನ ಚೀಟಿ, ಉದ್ಯೋಗಿ ಸಂಖ್ಯೆ ಎಲ್ಲವನ್ನೂ ನೀಡಿದೆ. ಕೋರಮಂಗಲದಲ್ಲಿ ಓಲಾ ಸಂಸ್ಥೆಯ ಕಚೇರಿಯಿದ್ದು, ಅಲ್ಲಿ ಈ ಶ್ವಾನ ಇದೆ ಎಂದು ಬರೆದುಕೊಂಡಿದ್ದಾರೆ. ನಾಯಿಯ ಹುದ್ದೆಯನ್ನು "ಓಲಾ ಎಲೆಕ್ಟ್ರಿಕ್​ ಐಡಿ ಕಾರ್ಡ್​ ಹೋಲ್ಡರ್​' ಎಂದು ತಿಳಿಸಲಾಗಿದೆ. ಶ್ವಾನದ ರಕ್ತದ ಗುಂಪು ಮಾಹಿತಿಯನ್ನು ಐಡಿ ಕಾರ್ಡ್​ನಲ್ಲಿ ನಮೂದಿಸಲಾಗಿದೆ.