padagrahana 
ಜಿಲ್ಲೆ

ಪದಾಧಿಕಾರಿಗಳ ಪದಪ್ರದಾನ ಕಾರ್ಯಕ್ರಮ

Karthika K.S

ಕೋಟ: ಕೋಟ-ಸಿಟಿ ರೋಟರಿ ಕ್ಲಬ್ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಕಾರ್ಯಕ್ರಮ ಶನಿವಾರ ಬ್ರಹ್ಮಾವರದಲ್ಲಿ ಜರುಗಿತು.

ಕ್ಲಬ್‌ನ ಅಧ್ಯಕ್ಷರಾಗಿ ಉದ್ಯಮಿ, ಕೋಟತಟ್ಟು ಗ್ರಾಪಂ ಸದಸ್ಯ ಪ್ರಕಾಶ್ ಹಂದಟ್ಟು, ಕಾರ್ಯದರ್ಶಿಯಾಗಿ ಕೋಡಿ ಗ್ರಾಪಂ ಸದಸ್ಯ ಕೃಷ್ಣ ಪೂಜಾರಿ ಅಧಿಕಾರ ಸ್ವೀಕರಿಸಿದರು.

ಸಹಾಯಕ ಗವರ್ನರ್ ಶ್ಯಾಮ್‌ಸುಂದರ್ ನಾಯಿರಿ ಪದಪ್ರದಾನ ನೆರವೇರಿಸಿ ಮಾತನಾಡಿ, ರೋಟರಿ ಮೂಲಕ ನಿರಂತರ ಸಮಾಜ ಸೇವೆ ಸಾಧ್ಯವಿದೆ. ಕ್ಲಬ್ ಅಧ್ಯಕ್ಷ ಪ್ರಕಾಶ್ ಹಂದಟ್ಟು, ಕಾರ್ಯದರ್ಶಿ ಕೃಷ್ಣ ಪೂಜಾರಿ ಗ್ರಾಪಂ ಸದಸ್ಯರಾಗಿ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮುಂದೆ ರೋಟರಿ ಮೂಲಕ ಇವರ ಸೇವಾ ಕಾರ್ಯ ಮುಂದುವರಿಯಲಿದೆ ಎಂದರು.

ಹಿರಿಯ ರೋಟರಿ ಸದಸ್ಯ ಸತೀಶ್ ಶೆಟ್ಟಿ ಶುಭ ಹಾರೈಸಿದರು. ಸ್ಥಳೀಯ ಶಾಲೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು, ಮಾಜಿ ಸಹಾಯಕ ಗವರ್ನರ್ ಹದ್ದೂರು ಮಮತಾ ಶೆಟ್ಟಿ ಅವರನ್ನು ಗೌರವಿಸಲಾಯಿತು. ವಲಯ ಸೇನಾನಿ ರವೀಂದ್ರ ಶೆಟ್ಟಿ, ಹಿಂದಿನ ಸಾಲಿನ ಅಧ್ಯಕ್ಷ ಅನಿಲ್ ಸುವರ್ಣ, ಕಾರ್ಯದರ್ಶಿ ಪ್ರಕಾಶ್ ಪೂಜಾರಿ ಉಪಸ್ಥಿತರಿದ್ದರು. ಉಪಾಧ್ಯಕ್ಷ ದಯಾನಂದ ಆಚಾರ್ಯ ಸ್ವಾಗತಿಸಿದರು. ಮಾಜಿ ಕಾರ್ಯದರ್ಶಿ ಪ್ರಕಾಶ್ ಪೂಜಾರಿ ವರದಿ ವಾಚಿಸಿದರು. ಶಿವಾನಂದ ನಾಯರಿ ಕಾರ್ಯಕ್ರಮ ನಿರೂಪಿಸಿದರು.