ಜಿಲ್ಲೆ

ದಾವಣಗೆರೆ ಭಕ್ತರಿಂದ ಮಾರಿಗುಡಿ ಕಾಮಗಾರಿ ವೀಕ್ಷಣೆ

ಇಂದಿರಾ ಎನ್ ಕೆ

ಪಡುಬಿದ್ರಿ: ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವ ಸಿದ್ಧತೆಯಲ್ಲಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ದಾವಣಗೆರೆ ಭಾಗದ ಭಕ್ತರು ಆಗಮಿಸಿ ಕಾಮಗಾರಿ ವೀಕ್ಷಿಸಿದರು.

ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ದಾವಣಗೆರೆ ಜೆ.ಜೆ.ಎಂ ವೈದ್ಯಕೀಯ ಕಾಲೇಜು ಮುಖ್ಯಸ್ಥ ಡಾ.ಆಲೂರು ಮಂಜುನಾಥ್, ಎಪಿಎಂಸಿ ವರ್ತಕರ ಸಂಘದ ಅನಬೇರು ಜಗದೀಶ್, ಮಾಲತೇಶ್ ಫರ್ನಿಶಿಂಗ್ ಸೆಂಟರ್ ಮಾಲೀಕ ಮಾಲತೇಶ್, ನವೀನ್ ಸಂಕೋಲ್ ಶಾಮನೂರು ಹಾಗೂ ಕಾಯಿಸ್ವಾಮಿ ಗುರು ಕುಂಬಳೂರು ಪ್ರಸನ್ನ ಕುಮಾರ್ ಮತ್ತಿತರರು ಶುಕ್ರವಾರ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿ ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯಾ ಅವರಿಂದ ಅಮ್ಮನ ಅನುಗ್ರಹ ಪ್ರಸಾದ ಸ್ವೀಕರಿಸಿದರು. ಜಿರ್ಣೋದ್ಧಾರ ಕಾಮಗಾರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.