ಬ್ರಹ್ಮಾವರ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಬ್ರಹ್ಮಾವರ ತಾಲೂಕು, ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಡಿ ಬಾರ್ಕೂರು ವಲಯದ ಪೌಷ್ಟಿಕ ಆಹಾರ ಕಾರ್ಯಕ್ರಮವನ್ನು ಹೇರಾಡಿ ಕೂಡ್ಲಿ ಜನಾರ್ದನ ದೇವಸ್ಥಾನದಲ್ಲಿ ಶ್ರೀನಿವಾಸ ಉಡುಪ ಉದ್ಘಾಟಿಸಿದರು.
ಯಡ್ತಾಡಿ ಗ್ರಾಪಂ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಯೋಜನಾಧಿಕಾರಿ ರಮೇಶ್ ಪಿ ಕೆ., ತಾಲೂಕು ಸಮನ್ವಯಾಧಿಕಾರಿ ಪುಷ್ಪಲತಾ, ವಲಯ ಮೇಲ್ವಿಚಾರಕ ರವೀಂದ್ರ, ಸೇವಾ ಪ್ರತಿನಿಧಿ ಕುಸುಮಾ ಹೆಬ್ಬಾರ, ಒಕ್ಕೂಟ ಅಧ್ಯಕ್ಷೆ ಮಂಜುಳಾ, ಶಾಲಿನಿ, ಕೇಂದ್ರ ಸಂಯೋಜಕಿ ಶಾರದಾ, ಜ್ಞಾನವಿಕಾಸ ಕೇಂದ್ರ ಸದಸ್ಯರು ಉಪಸ್ಥಿತರಿದ್ದರು.