ಜಿಲ್ಲೆ

ನಾಯಕತ್ವ ಅನಾವರಣಕ್ಕೆ ಎನ್ನೆಸ್ಸೆಸ್ ರಹದಾರಿ: ಡಾ.ಅರುಣ್‌ಪ್ರಕಾಶ್ ಅಭಿಮತ

ಸೌಮ್ಯ ಆರ್

ಸುಬ್ರಹ್ಮಣ್ಯ: ಯುವ ಜನಾಂಗಕ್ಕೆ ಕಾಯಕದ ಮಹತ್ವ ತಿಳಿಸುವುದು ಅತ್ಯವಶ್ಯಕ. ಸೇವೆಯಿಂದ ಬದುಕು ಪಾವನ ಎಂಬುದನ್ನು ವಿದ್ಯಾರ್ಥಿಗಳು ಅರಿತುಕೊಳ್ಳಲು ಎನ್ನೆಸ್ಸಎಸ್ ಬುನಾದಿ. ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆಯೊಂದಿಗೆ ನಾಯಕತ್ವದ ಅನಾವರಣಕ್ಕೆ ಎನ್ನೆಸ್ಸೆಸ್ ರಹದಾರಿ ಎಂದು ಪುತ್ತೂರು ವಿವೇಕಾನಂದ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಅರುಣ್ ಪ್ರಕಾಶ್ ಹೇಳಿದರು.

ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದ ಎಸ್‌ಎಸ್‌ಪಿಯು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ 2025-26ನೇ ಸಾಲಿನ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.

ಪ್ರಾಚಾರ್ಯ ಸೋಮಶೇಖರ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಸಾಂಸ್ಕೃತಿಕ ಸಂಘದ ಸಂಚಾಲಕಿ ರೇಖಾರಾಣಿ ಸೋಮಶೇಖರ್, ಎನ್ನೆಸ್ಸೆಸ್ ಯೋಜನಾಧಿಕಾರಿಗಳಾದ ಸೌಮ್ಯಾ ದಿನೇಶ್, ಪೂರ್ಣಿಮಾ ಎನ್., ಘಟಕದ ನಾಯಕ ಸ್ವಸ್ತಿಕ್, ಘಟಕದ ನಾಯಕಿ ಹರ್ಷಿತಾ ಇದ್ದರು. ವಿದ್ಯಾರ್ಥಿ ಚಿರಂಜೀವಿ ನಿರೂಪಿಸಿದರು.