ಕುಂದಾಪುರ: ಕುಂದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್‌ಎಸ್‌ಎಸ್ ಘಟಕದ ಆಶ್ರಯದಲ್ಲಿ ಎನ್‌ಎಸ್‌ಎಸ್ ಪೂರ್ವ ಪರಿಚಯ ಕಾರ್ಯಕ್ರಮ ಶಾಲೆಯ ಸಭಾಂಗಣದಲ್ಲಿ ಗುರುವಾರ ನಡೆಯಿತು.
ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ. ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ (ಘಟಕ-02) ದೀಪಾ ಪೂಜಾರಿ ಮಾತನಾಡಿ, ಎನ್ನೆಸ್ಸೆಸ್ ಉದ್ದೇಶಗಳು, ಕಾರ್ಯಚಟುವಟಿಕೆಗಳು ಹಾಗೂ ಎನ್ನೆಸ್ಸೆಸ್ ವಿಶೇಷ ಶಿಬಿರದ ಕುರಿತಾಗಿ ಮಾಹಿತಿಯನ್ನು ನೀಡಿದರು. ಎನ್ನೆಸ್ಸೆಸ್ ಸಹ ಸಂಚಾಲಕ ಸುಕೇಶ ಚಂದ್ರಶೇಖರ ಶುಭಾಶಂಸನೆ ಮಾಡಿದರು. ಎನ್‌ಎಸ್‌ಎಸ್ ನಾಯಕ ವಿಶ್ವನಾಥ, ನಾಯಕಿ ದಿವ್ಯಶ್ರೀ ಉಪಸ್ಥಿತರಿದ್ದರು.
ಸ್ವಯಂ ಸೇವಕಿ ರಾಧಿಕಾ ಸ್ವಾಗತಿಸಿದರು. ಎನ್ನೆಸ್ಸೆಸ್ ಯೋಜನಾಧಿಕಾರಿ ವನಿತಾ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ವಯಂ ಸೇವಕ ನಾಗರಾಜ್ ವಂದಿಸಿದರು. ಸ್ವಯಂ ಸೇವಕ ದೀಕ್ಷಿತ್ ನಿರೂಪಿಸಿದರು.