ಗೊರೇಬಾಳ ಗ್ರಾಮದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೊಜನೆಯ ವಾರ್ಷಿಕ ಶಿಬಿರವನ್ನು ಗ್ರಾಪಂ ಅಧ್ಯಕ್ಷೆ ಎಚ್.ಬಸಮ್ಮ ಉದ್ಘಾಟಿಸಿದರು. ಡಾ. ಸಿದ್ದರಾಮೇಶ್ವರ ಶರಣರು, ಪ್ರಮುಖರಾದ ದೊಡ್ಡ ಭೀಮನಗೌಡ, ಪರಶುರಾಮ ಮಲ್ಲಾಪುರ, ಶರಣೇಗೌಡ ನೆಟೆಕಲ್, ಚನ್ನಬಸಮ್ಮ ಪರುಶರಾಮ, ಡಾ.ಶರಣಪ್ಪ, ಅರುಣಕುಮಾರ ಇದ್ದರು. 
ಜಿಲ್ಲೆ

ಸೇವಾ ಮನೋಭಾವ ಬೆಳೆಸಿಕೊಳ್ಳಲು ಎನ್‌ಎಸ್‌ಎಸ್ ಸಹಕಾರಿ

Gangavati - Desk - Veeresh S Ullagaddi

ಗೊರೇಬಾಳ: ದೃಢ ಮನಸ್ಸಿನಿಂದ ಸೇವೆಗೆ ಸಮರ್ಪಿಸಿಕೊಂಡಾಗ ಕೆಲಸದಲ್ಲಿ ಯಶಸ್ಸು ದೊರೆಯಲಿದೆ ಎಂದು ಡಾ.ಸಿದ್ದರಾಮೇಶ್ವರ ಶರಣರು ಹೇಳಿದರು.


ಗ್ರಾಮದ ಶರಣಬಸವೇಶ್ವರ ದೇವಸ್ಥಾನದಲ್ಲಿ ಸಿಂಧನೂರಿನ ನೋಬೆಲ್ ಪದವಿ ವಿದ್ಯಾಲಯದಿಂದ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಬುಧವಾರ ಮಾತನಾಡಿದರು.

ಗ್ರಾಮಗಳ ಉದ್ಧಾರಕ್ಕಾಗಿ ಸೇವಾ ಮನೋಭಾವ ಬೆಳೆಸಿಕೊಳ್ಳಲು ಎನ್‌ಎಸ್‌ಎಸ್ ಸಹಾಯವಾಗುತ್ತದೆ. ಶ್ರದ್ಧೆ, ಶಿಸ್ತಿನ ಮೂಲಕ ಶಿಬಿರದ ಉದ್ದೇಶ ರೂಢಿಸಿಕೊಂಡು ಇತರರಿಗೆ ಸಹಾಯ ಮಾಡಬೇಕು ಎಂದರು.


ನಿವೃತ್ತ ಪಾಚಾರ್ಯ ಶರಣಪ್ಪಗೌಡ ನೆಟೆಕಲ್ ಮಾತನಾಡಿ, ಶಿಬಿರಾರ್ಥಿಗಳು ರಾಷ್ಟ್ರೀಯ ಸೇವಾ ಯೊಜನೆಯ ಧ್ವಜದಲ್ಲಿರುವ ಮೂರು ಬಣ್ಣಗಳನ್ನು ಪ್ರೇರಣೆಯಾಗಿಟ್ಟುಕೊಳ್ಳಬೇಕು. ತ್ಯಾಗ, ಶ್ರದ್ಧೆ , ಪ್ರಾಮಾಣಿಕತೆಗೆ ಬದ್ಧರಾಗಿರಬೇಕು ಎಂದರು.

ಕಾಲೇಜಿನ ಅಧ್ಯಕ್ಷ ಪರುಶರಾಮ ಮಲ್ಲಾಪುರ, ಕಾರ್ಯದರ್ಶಿ ಡಾ.ಅರುಣಕುಮಾರ, ಸಮಾಜ ಸೇವಕ ಡಾ.ಶರಣಪ್ಪ, ಗ್ರಾಪಂ ಅಧ್ಯಕ್ಷೆ ಎಚ್.ಬಸಮ್ಮ ಪ್ರಾಚಾರ್ಯರಾದ ಆನಂದ, ನಾಗರಾಜ ಎಂ., ಪ್ರಮುಖರಾದ ಹೊನ್ನೂರಪ್ಪ, ವೀರೇಶ ಹಾಲಾಪುರ, ಬುಡ್ಡಪ್ಪ ನಾಯಕ, ದೇವೇಂದ್ರಪ್ಪ, ಎಸ್.ಎಸ್.ಜೀನೂರ, ಅಂಬಣ್ಣ, ಅಶೋಕ ಮ್ಯಾಗಳಮನಿ ಇದ್ದರು.