ಯಲಬುರ್ಗಾ ತಾಲೂಕಿನ ಸಂಗನಹಾಳದಲ್ಲಿ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ತಾಪಂ ಸಹಾಯಕ ನಿರ್ದೇಶಕ ಹನುಮಂತಗೌಡ ಪಾಟೀಲ್ ಮಾತನಾಡಿದರು. ತಾಂತ್ರಿಕ ಸಂಯೋಜಕ ಸಂತೋಷ ನಂದಾಪುರ, ಐಇಸಿ ಸಂಯೋಜಕ ಶರಣಪ್ಪ ಹಾಳಕೇರಿ, ಪಿಡಿಒ ಸರ್ವಮಂಗಳ ಇದ್ದರು. 
ಜಿಲ್ಲೆ

ನರೇಗಾ ಯೋಜನೆ ಸದ್ಬಳಕೆಯಾಗಲಿ

Kopala - Desk - Eraveni

ಯಲಬುರ್ಗಾ: ನರೇಗಾ ಯೋಜನೆಯಡಿ ಜಮೀನು ಇರುವ ರೈತರು ವೈಯಕ್ತಿಕ ಕಾಮಗಾರಿ ಪಡೆದು ಆರ್ಥಿಕವಾಗಿ ಸಬಲರಾಗಬೇಕು ಎಂದು ತಾಪಂ ಸಹಾಯಕ ನಿರ್ದೇಶಕ ಹನುಮಂತಗೌಡ ಪಾಟೀಲ್ ಹೇಳಿದರು.

ತಾಲೂಕಿನ ಸಂಗನಹಾಳ ಗ್ರಾಮದಲ್ಲಿ ನರೇಗಾದಡಿ ಆರಂಭವಾಗಿರುವ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ವಲಸೆ ಯಾಕ್ರಿ ನಿಮ್ಮೂರಲ್ಲೇ ಉದ್ಯೋಗ ಖಾತ್ರಿ ಅಭಿಯಾನ ಹಾಗೂ ಸ್ವೀಪ್ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಲಸೆ ಯಾಕ್ರಿ ನಿಮ್ಮೂರಲ್ಲೆ ಉದ್ಯೋಗ ಖಾತ್ರಿ ಅಭಿಯಾನದ ಅಂಗವಾಗಿ ಎರಡು ತಿಂಗಳ ನಿರಂತರ ಕೆಲಸ ನೀಡಲಾಗುವುದು. ಕೂಲಿಕಾರರು ಸದುಪಯೋಗ ಪಡೆಯಬೇಕು. ಪ್ರತಿಯೊಬ್ಬರು ಕಡ್ಡಾಯ ಮತದಾನ ಮಾಡಬೇಕು.

ಕಳೆದ ಚುನಾವಣೆಯಲ್ಲಿ ನಿರಂತರ ಸ್ವೀಪ್ ಕಾರ್ಯಕ್ರಮ ಹಮ್ಮಿಕೊಂಡಿದ್ದರಿಂದ ಶೇ.2ರಷ್ಟು ಹೆಚ್ಚಿನ ಮತದಾನವಾಗಿತ್ತು. ಈ ಬಾರಿಯೂ ಸಂಗನಹಾಳ ಗ್ರಾಪಂ ವ್ಯಾಪ್ತಿಯಲ್ಲಿ ಹೆಚ್ಚು ಮತದಾನವಾಗಬೇಕು ಎಂದರು.

ತಾಪಂ ತಾಂತ್ರಿಕ ಸಂಯೋಜಕ ಸಂತೋಷ ನಂದಾಪುರ, ಐಇಸಿ ಸಂಯೋಜಕ ಶರಣಪ್ಪ ಹಾಳಕೇರಿ, ಪಿಡಿಒ ಸರ್ವಮಂಗಳ, ಕರವಸೂಲಿಗಾರ ಶರಣಪ್ಪ, ಬಿಎಫ್‌ಟಿ ಶಿವಪ್ಪ ಸೂಡಿ ಇತರರಿದ್ದರು.