ಜಿಲ್ಲೆ

ಜಾಗ ತೆರವುಗೊಳಿಸಲು ನೋಟಿಸ್ : ಬೆಂಕಿ ಅವಘಡದಿಂದ ತೊಂದರೆಗೀಡಾಗಿರುವ ವ್ಯಾಪಾರಿಗಳಿಗೆ ಸರ್ಕಾರ ಆಘಾತ

ಸೌಮ್ಯ ಆರ್

ಕಾಸರಗೋಡು: ಚೆರ್ಕಳ-ಕಲ್ಲಡ್ಕ ರಾಜ್ಯ ಹೆದ್ದಾರಿಯ ಪೆರ್ಲ ಪೇಟೆಯಲ್ಲಿ ಉಂಟಾಗಿದ್ದ ಬೆಂಕಿ ಆಕಸ್ಮಿಕದಲ್ಲಿ ಸಂಪೂರ್ಣ ಸುಟ್ಟುಹೋಗಿರುವ ಏಳು ವ್ಯಾಪಾರಿ ಸಂಸ್ಥೆಗಳಿಗೆ ಅಲ್ಲಿನ ಜಾಗ ತೆರವುಗೊಳಿಸಿ ತೆರಳುವಂತೆ ಲೋಕೋಪಯೋಗಿ ಇಲಾಖೆ ಹೊರಡಿಸಿರುವ ನೋಟಿಸ್ ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿದೆ.

ಬೆಂಕಿಗಾಹುತಿಯಾಗಿ ಲಕ್ಷಾಂತರ ರೂ. ನಷ್ಟ ಉಂಟಾಜಛಿ ಸಂಕಷ್ಟದಲ್ಲಿರುಅಜ ಇಲಾಖೆ ಹೊರಡಿಸಿರುವ ಈ ನೋಟಿಸ್ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಪಿಡಬ್ಲುೃಡಿ ಪರಂಬೋಕ್ ಸ್ಥಳದಲ್ಲಿ ಕಟ್ಟಡ ನಿರ್ಮಿಸಲಾಗಿದ್ದು, ಏಳು ದಿನದೊಳಗೆ ಕಟ್ಟಡ ತೆರವುಗೊಳಿಸಬೇಕು ಅಥವಾ ದಿನವೊಂದಕ್ಕೆ 500 ರೂ.ಯಂತೆ ದಂಡ ವಸೂಲಿ ಮಾಡಲಾಗುವುದು ಎಂದೂ ನೋಟಿಸ್‌ನಲ್ಲಿ ತಿಳಿಸಲಾಗಿದೆ. ಈ ಜಾಗದ ವ್ಯಾಜ್ಯವೊಂದು ನ್ಯಾಯಾಲಯದಲ್ಲಿ ದೀರ್ಘಕಾಲದಿಂದ ಜಾರಿಯಲ್ಲಿರುವ ಮಧ್ಯೆ ನೋಟಿಸ್ ಜಾರಿ ಮಾಡುವ ಮೂಲಕ ಇಲಾಖೆ ನ್ಯಾಯಾಲಯ ನಿಂದನೆಗೂ ಕಾರಣವಾಗುವ ಸಾಧ್ಯತೆ ಎದುರಾಗಿದೆ.

ಬಿಜೆಪಿ ಖಂಡನೆ: ಖಾಸಗಿ ಜಮೀನಿನಲ್ಲಿರುವ ಕಟ್ಟಡಗಳಲ್ಲಿ ಬಾಡಿಗೆ ಪಡೆದು ವರ್ಷಗಟ್ಟಲೆ ವ್ಯಾಪಾರ ಮಾಡುತ್ತಿರುವವರನ್ನು ತೆರವು ಮಾಡುವಂತೆ ಸರ್ಕಾರ ಸೂಚಿಸಿರುವುದು ಖಂಡನೀಯ. ಬೆಂಕಿಯ ಕಾವು ಆರುವ ಮೊದಲೇ ವ್ಯಾಪಾರಿ ಸಂಸ್ಥೆಯನ್ನು ತೆರವುಗೊಳಿಸಲು ನೋಟಿಸ್ ನೀಡುವ ಮೂಲಕ ಸರ್ಕಾರ ಮಾನವೀಯತೆಯನ್ನು ಹೊಸಕಿ ಹಾಕಿದೆ. ಸರ್ಕಾರ ಜಾರಿಗೊಳಿಸಿರುವ ನೋಟಿಸ್ ಹಿಂದಕ್ಕೆ ಪಡೆದು, ವ್ಯಾಪಾರಿಗಳಿಗೆ ಸೂಕ್ತ ನಷ್ಟ ಪರಿಹಾರ ಒದಗಿಸಬೇಕು. ಘಟನೆ ಬಗ್ಗೆ ವ್ಯಾಪಾರಿಗಳು ಸಂಶಯ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಕಿಡಿಗೇಡಿಗಳ ಕೈವಾಡದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಬಿಜೆಪಿ ರಾಜ್ಯ ಸಮಿತಿ ಕಾರ್ಯದರ್ಶಿ ಕೆ.ಶ್ರೀಕಾಂತ್ ಆಗ್ರಹಿಸಿದ್ದಾರೆ.