ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮುದ್ರಾಡಿಯಲ್ಲಿ ಸ್ವಾತಿ ಪ್ರಶಾಂತ ಶೆಟ್ಟಿ ಇವರು ಕೊಡುಗೆಯಾಗಿ ನೀಡಿದ ನೋಟ್‌ಬುಕ್ ವಿತರಣಾ ಕಾರ್ಯಕ್ರಮ ಜರುಗಿತು 
ಜಿಲ್ಲೆ

ಉತ್ತಮ ಗುಣಗಳಿಂದ ಸಮಾಜಕ್ಕೆ ಮಾದರಿ : ಸ್ವಾತಿ ಪ್ರಶಾಂತ ಶೆಟ್ಟಿ

ಇಂದಿರಾ ಎನ್ ಕೆ

ಹೆಬ್ರಿ: ವಿದ್ಯಾರ್ಥಿ ಜೀವನದಲ್ಲಿ ಆಸಕ್ತಿಯಿಂದ ಕಲಿತು ಉತ್ತಮ ಗುಣಗಳನ್ನು ಬೆಳೆಸಿಕೊಂಡು ಸಮಾಜಕ್ಕೆ ಮಾದರಿಯಾಗಿ ಬದುಕಬೇಕು ಎಂದು ಸ್ವಾತಿ ಪ್ರಶಾಂತ ಶೆಟ್ಟಿ ಹೇಳಿದರು. ಮುದ್ರಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಡುಗೆ ನೀಡಿದ ನೋಟ್‌ಬುಕ್ ವಿತರಣಾ ಕಾರ್ಯಕ್ರಮದಲ್ಲಿ 185 ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಿ ಮಾತನಾಡಿದರು.

ಎಸ್‌ಡಿಎಂಸಿ ಅಧ್ಯಕ್ಷ ಶುಭದರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಹಿರಿಯ ಸದಸ್ಯ ಗಣಪತಿ ಎಂ.ಮಾತನಾಡಿ, ಕೊಡುಗೆ ನೀಡಿದ ನೋಟ್‌ಬುಕ್ ನಿಮ್ಮ ಶೈಕ್ಷಣಿಕ ಪ್ರಗತಿ ಪೂರಕವಾದದ್ದು ಇದನ್ನು ಸದುಪಯೋಗ ಪಡಿಸಿಕೊಳ್ಳಿ ಗುರು ಹಿರಿಯರ ಮಾರ್ಗದರ್ಶನದಂತೆ ಮುನ್ನೆಡೆಯಿರಿ ಎಂದರು.
ಮುಖ್ಯ ಶಿಕ್ಷಕ ಮುದ್ದೂರು ಶ್ರೀನಿವಾಸ್ ಭಂಡಾರಿ, ಶಿಕ್ಷಕ ವೃಂದ, ಪಾಲಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಶ್ರೀನಿವಾಸ ಭಂಡಾರಿ ಸ್ವಾಗತಿಸಿ ವಂದಿಸಿದರು.