ಕಂಪ್ಲಿ: ತಾಲೂಕಿನ ನಂ.10 ಮುದ್ದಾಪುರ ಗ್ರಾಪಂ ಅಧ್ಯಕ್ಷೆಯಾಗಿ ಸೋಮೇಶ್ವರಿ, ಉಪಾಧ್ಯಕ್ಷೆಯಾಗಿ ಸಾವಿತ್ರಮ್ಮ ಜಡೆ ಗುರುವಾರ ಆಯ್ಕೆಯಾದರು.
ಅಧ್ಯಕ್ಷ (ಎಸ್ಸಿ)-ಉಪಾಧ್ಯಕ್ಷ (ಸಾಮಾನ್ಯ) ಸ್ಥಾನಕ್ಕೆ ಸ್ಪರ್ಧಿಸಿದ್ದ ಹುಲಿಗೆಮ್ಮ, ಶಿವಕಾಂತಮ್ಮ ವಿಠ್ಠಲಾಪುರ ತಲಾ 10 ಮತ ಪಡೆದರೆ, ಸೋಮೇಶ್ವರಿ ಹಾಗೂ ಸಾವಿತ್ರಮ್ಮ ತಲಾ 12 ಮತ ಪಡೆದು ಜಯಶಾಲಿಯಾದರು ಎಂದು ಚುನಾವಣಾಧಿಕಾರಿ ನೀರಾವರಿ ನಿಗಮದ ಎಇಇ ಎ.ಶ್ರೀನಿವಾಸ್ ಘೋಷಿಸಿದರು.
ಇದನ್ನೂ ಓದಿ: ದಾವಣಗೆರೆಯಲ್ಲಿ ಮತ್ತೊಬ್ಬ ಉಗ್ರನ ಬಂಧನ?!
ಗ್ರಾಪಂ ಮಾಜಿ ಅಧ್ಯಕ್ಷ ಕಟ್ಟೆ ಮಹಾಂತೇಶ್ ಮಾತನಾಡಿ, ಕಾಂಗ್ರೆಸ್ ಬೆಂಬಲಿತ ಸದಸ್ಯರು ಸಂಘಟಿತರಾಗಿ ಅಧ್ಯಕ್ಷೆ, ಉಪಾಧ್ಯಕ್ಷೆಯನ್ನುಆಯ್ಕೆ ಮಾಡುವ ಮೂಲಕ ಶಾಸಕರ ಕೈ ಬಲಪಡಿಸಿದ್ದಾರೆ. ಸದಸ್ಯರು ಸಂಘಟಿತರಾಗಿ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು. ಗ್ರಾಪಂನ ಎಲ್ಲ 22 ಜನ ಸದಸ್ಯರು ಹಾಜರಾಗಿದ್ದರು. ಪಿಡಿಒ ಶಿಲ್ಪಾರಾಣಿ, ಪಿಎಸ್‌ಐ ವಿಜಯಪ್ರತಾಪ್ ಎಸ್.ಪಾಟೀಲ್, ಪ್ರಮುಖರಾದ ಕೆ.ಶ್ರೀನಿವಾಸ ರಾವ್, ಕಟ್ಟೆ ವೆಂಕಟೇಶ್, ಟಿ.ಸೋಮಶೇಖರ್, ವೈ.ಉಮೇಶ್, ನರಸಣ್ಣ, ಎ.ತಾಯಣ್ಣ ಇತರರಿದ್ದರು.