ಜಿಲ್ಲೆ

ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ನಿಟ್ಟೆ ಕಾಲೇಜು ದ್ವಿತೀಯ

ಇಂದಿರಾ ಎನ್ ಕೆ

ಕಾರ್ಕಳ: ಮಂಗಳೂರು ಕೆಪಿಟಿಯಲ್ಲಿ ಇತ್ತೀಚೆಗೆ 45ನೇ ರಾಜ್ಯಮಟ್ಟದ ಅಂತರ ಪಾಲಿಟೆಕ್ನಿಕ್ ಅಥ್ಲೆಟಿಕ್ ಕ್ರೀಡಾಕೂಟ 2025ರಲ್ಲಿ ನಿಟ್ಟೆ ಎನ್.ಆರ್.ಎ.ಎಂ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು, ಸಂಸ್ಥೆ ಚಾಂಪಿಯನ್‌ಷಿಪ್ ವಿಭಾಗದಲ್ಲಿ ಎರಡನೇ ಸ್ಥಾನ ಗಳಿಸಿದೆ.

100 ಮೀಟರ್ ಓಟದಲ್ಲಿ ಅಪೇಕ್ಷಾ 3ನೇ ಸ್ಥಾನ, 400 ಮೀಟರ್ ಓಟದಲ್ಲಿ 2ನೇ ಸ್ಥಾನ ಹಾಗೂ ರಿಲೇಯಲ್ಲಿ 3ನೇ ಸ್ಥಾನ, ಸ್ವಸ್ತಿ ಲಾಂಗ್ ಜಂಪ್‌ನಲ್ಲಿ 3ನೇ ಸ್ಥಾನ, ಹೈಜಂಪ್‌ನಲ್ಲಿ 3ನೇ ಸ್ಥಾನ, ವರ್ಷಾ 200 ಮೀಟರ್ ಓಟದಲ್ಲಿ 3ನೇ ಸ್ಥಾನ, ರಿಲೇಯಲ್ಲಿ 3ನೇ ಸ್ಥಾನ, ದೀಕ್ಷಾ 200 ಮೀಟರ್ ಓಟದಲ್ಲಿ 3ನೇ ಸ್ಥಾನ, ಜಾವೆಲಿನ್ ಥ್ರೋನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ರಿತಿಕ್ ಆರ್.ಪೂಜಾರಿ 1500 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ, 800 ಮೀಟರ್ ಓಟದಲ್ಲಿ 2ನೇ ಸ್ಥಾನ ಹಾಗೂ ಅವರ ಅತ್ಯುತ್ತಮ ಪ್ರದರ್ಶನಕ್ಕಾಗಿ ವೈಯಕ್ತಿಕ ಚಾಂಪಿಯನ್‌ಷಿಪ್ ಪ್ರಶಸ್ತಿ ಪಡೆದ್ದಾರೆ. ರೋಹನ್ ಹೈಜಂಪ್‌ನಲ್ಲಿ ಪ್ರಥಮ ಸ್ಥಾನ, ಸೃಜನ್ ಸುವರ್ಣ, ದೀಕ್ಷಿತ್ ಆಚಾರ್ಯ ಟೇಬಲ್‌ಟೆನಿಸ್ ಡಬಲ್ಸ್‌ನಲ್ಲಿ ರನ್ನರ್‌ಅಪ್ ಸ್ಥಾನ ಗಳಿಸಿದೆ.