ಯೋಗದಲ್ಲಿ ವಿಶ್ವದಾಖಲೆ ನಿರ್ಮಿಸಿದ ನಿಹಾನಿ. 
ಜಿಲ್ಲೆ

ಯೋಗದಲ್ಲಿ ವಿಶ್ವದಾಖಲೆ ನಿರ್ಮಿಸಿದ ನಿಹಾನಿ

Vinod Kumar

ಸುಬ್ರಹ್ಮಣ್ಯ: ಗುತ್ತಿಗಾರಿನ ಅಮರ ಯೋಗ ತರಬೇತಿ ಕೇಂದ್ರದ ವಿದ್ಯಾರ್ಥಿನಿ ನಿಹಾನಿ ವಾಲ್ತಾಜೆ ಪರಿವೃತ್ತ ಪದ್ಮಸಾನದಲ್ಲಿ 1 ಗಂಟೆ 8 ನಿಮಿಷ 10 ಸೆಕೆಂಡ್ ಇರುವ ಮೂಲಕ ಲಂಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ತಮ್ಮ ಹೆಸರು ದಾಖಲಿಸಿಕೊಂಡಿದ್ದಾರೆ.

ಇವರು ವಾಲ್ತಾಜೆ ಪ್ರಶಾಂತ್ ವಾಲ್ತಾಜೆ ಮತ್ತು ಚೈತ್ರ ದಂಪತಿಯ ಪುತ್ರಿ. ಅಮರ ತಾಲೂಕು ಪಬ್ಲಿಕ್ ಚಾರಿಟೆಬಲ್ ಟ್ರಸ್ಟ್‌ನ ಅಮರ ಯೋಗ ತರಬೇತಿ ಕೇಂದ್ರದ ಯೋಗ ಶಿಕ್ಷಕ ಶರತ್ ಮರ್ಗಿಲಡ್ಕ ಅವರ ಶಿಷ್ಯೆ. ಗುತ್ತಿಗಾರಿನ ಬ್ಲೆಸ್ಡ್ ಕುರಿಯಕೋಸ್‌ನ 5ನೇ ತರಗತಿ ವಿದ್ಯಾರ್ಥಿನಿ.