ಜಿಲ್ಲೆ

ಹೊನಲು ಬೆಳಕಿನ ಕ್ರಿಕೆಟ್ ಟೂರ್ನಿ

ಇಂದಿರಾ ಎನ್ ಕೆ

ಬ್ರಹ್ಮಾವರ: ಬ್ರಹ್ಮಾವರ ಫ್ರೆಂಡ್ಸ್ ದಶಮಾನೋತ್ಸವ ಅಂಗವಾಗಿ ರಾಷ್ಟ್ರಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಟೂರ್ನಮೆಂಟ್ ಬಿಪಿಎಲ್ ಟ್ರೋಫಿ- 2025 ಇತ್ತೀಚೆಗೆ ಬ್ರಹ್ಮಾವರ ಗಾಂಧಿ ಮೈದಾನದಲ್ಲಿ ಜರುಗಿತು.

ಶಿವನ್ಯ ಸ್ಟ್ರೈಕರ್ ಹೇರೂರು, ಬ್ರಹ್ಮಾವರ ಬುಲ್ಸ್ ನಡುವೆ ನಡೆದ ಸೆಣಸಾಟದಲ್ಲಿ ಶಿವನ್ಯ ಸ್ಟ್ರೈಕರ್ ಜಯಗಳಿಸಿತು. ಸಾಗರ ಆಚಾರ್ಯ ಸರಣಿ ಶ್ರೇಷ್ಠ ಪ್ರಶಸ್ತಿ ಬೈಕ್ ಬಹುಮಾನ ಪಡೆದುಕೊಂಡರು.

ಸಾಧಕ ಕ್ರೀಡಾಳುಗಳನ್ನು ಸನ್ಮಾನಿಸಲಾಯಿತು. ಸ್ಥಳೀಯ ಅನಾಥಾಶ್ರಮಕ್ಕೆ ಆರ್ಥಿಕ ನೆರವು ನೀಡಲಾಯಿತು. ಸುಗ್ಗಿ ಸುಧಾಕರ ಶೆಟ್ಟಿ, ಸಂಘ ಪಧಾಧಿಕಾರಿಗಳಾದ ಜಯ ಶಂಕರ್, ದೇವಾನಂದ ನಾಯಕ್, ಸತ್ಯರಾಜ್ ಬಿರ್ತಿ, ಶಶಿಕಾಂತ್ ಕುಂಜಾಲು, ಅರ್ಜುನ್ ಪ್ರಭು, ಮಹಮ್ಮದ್ ಇನ್ನಿತರರು ಉಪಸ್ಥಿತರಿದ್ದರು.