ಜಿಲ್ಲೆ

ರಾಮೇಶ್ವರಂ ಕೆಫೆ ಪ್ರಕರಣ-ಭಟ್ಕಳದಲ್ಲಿ ದಾಳಿ ನಡೆಸಿದ ಎನ್‌ಐಎ

Uttara Kannada - Subash Hegde

ಭಟ್ಕಳ: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ತಂಡ (ಎನ್‌ಐಎ) ಚುರುಕುಗೊಳಿಸಿದ್ದು, ಶಂಕೆಯ ಆದಾರದಲ್ಲಿ ಭಟ್ಕಳ ಪಟ್ಟಣದ ವ್ಯಕ್ತಿಯೊರ್ವನ ಮನೆಯ ಮೇಲೆ ದಾಳಿ ನಡೆಸಿ ಪರೀಶೀಲನೆ ನಡೆಸಿದೆ.
ಭಟ್ಕಳ ಪಟ್ಟಣದ ತಕಿಯಾ ಸ್ಟ್ರೀಟ್‌ನ ಶಂಕಿತ ಉಗ್ರ ಇಕ್ಬಾಲ್ ಭಟ್ಕಳ ಈತನ ಪುತ್ರ ಅಬ್ದುಲ್ ರಬಿ ಮನೆಯ ಮೇಲೆ ಬುಧವಾರ ಬೆಳ್ಳಂಬೆಳಗ್ಗೆ ಬೆಂಗಳೂರಿನ ಎನ್‌ಐಎ ತಂಡ ದಾಳಿ ನಡೆಸಿದೆ. ರಾಮೇಶ್ವರಂ ಕೆಫೆಯಲ್ಲಿ ಬಾಂಬರ್‌ನ ವಯಸ್ಸು ಈತನ ವಯಸ್ಸಿಗೆ ಹೋಲಿಕೆಯಾಗುತ್ತಿದ್ದ ಹಿನ್ನಲೆಯಲ್ಲಿ ತಂಡ ತನಿಖೆ ಕೈಗೊಂಡಿದೆ ಎನ್ನಲಾಗಿದೆ.

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ತನಿಖಾ ತಂಡ ಕರ್ನಾಟಕ ಮಾತ್ರವಲ್ಲದೆ ಇತರೆಡೆಯಲ್ಲೂ ದಾಳಿ ನಡೆಸುತ್ತಿದೆ. ಬೆಂಗಳೂರಿನ ಹೆಚ್ಚುವರಿ ಎಸ್‌ಪಿ ಅವರ ನೇತೃತ್ವದಲ್ಲಿ ಭಟ್ಕಳಕ್ಕೆ ಬಂದ ಎನ್ ಐಎ ಸ್ಥಳೀಯ ಪೊಲೀಸರ ಸಹಕಾರದಿಂದ ವಿಚಾರಣೆ ನಡೆಸಿದೆ.

ಇದನ್ನೂ ಓದಿ:

ಶಂಕಿತನ ಮನೆಯಲ್ಲಿ ದಾಳಿ ನಡೆಸಿ, ಬೆಂಗಳೂರಿನ ಕಚೇರಿಗೆ ಗುರುವಾರವೆ ಹಾಜರಾಗಿ ವಿಚಾರಣೆ ಎದುರಿಸುವಂತೆ ಸೂಚಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಭಟ್ಕಳದಲ್ಲಿ ಎನ್‌ಐಎ ತಂಡದ ದಾಳಿ ಸಂಚಲನ ಮೂಡಿಸಿದ್ದು, ದೇಶದ ಎಲ್ಲಿಯಾದರೂ ಭಯೋತ್ಪಾದನೆ ಘಟನೆ ನಡೆದರೂ ಕೊನೆಯಲ್ಲಿ ಭಟ್ಕಳದ ನಂಟು ಹೊಂದಿರುವದು ಹಿಂದೂ ಸಂಘಟನೆಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.