ಜಿಲ್ಲೆಯ ಇಬ್ಬರು ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್ !!

Lokayukta ride
Published on

ಕಾರವಾರ: ನಗರದ ಇಬ್ಬರು ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತರು ಶಾಕ್ ನೀಡಿದ್ದಾರೆ.
ಅಧಿಕ ಆಸ್ತಿ ಗಳಿಕೆ ಆರೋಪದ ಮೇಲೆ ಕಾರವಾರ ನಗರಾಭಿವೃದ್ಧಿ ಪ್ರಾಧಿಕಾರದ ಕಾರ್ಯ ನಿರ್ವಾಹಕ ಇಂಜಿನಿಯರ್ ಪ್ರಕಾಶ ರೇವಣಕರ್ ಹಾಗೂ ಅಬಕಾರಿ ಇಲಾಖೆ ಉಪ ಆಯುಕ್ತೆ ಎಂ.ರೂಪಾ ಅವರ ಮನೆಗಳ ಮೇಲೆ ದಾಳಿ ನಡೆದಿದೆ.
ಕಾಜುಬಾಗದಲ್ಲಿರುವ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ, ರೇವಣಕರ್ ಅವರಿಗೆ ಸೇರಿದ ಐಶ್ವರ್ಯಾ ಫ್ಲಾಜಾ, ಬಾಂಡಿಶಿಟ್ಟಾದಲ್ಲಿರುವ ರೇವಣಕರ್ ಇನ್ವರ್ಟ್ ಹಾಗೂ ಅಂಕೋಲಾದ ಅವರ ತಾಯಿಯ ಮನೆಯ ಮೇಲೆ ಲೋಕಾಯುಕ್ತ ಕಾರವಾರ ಎಸ್.ಪಿ ಕುಮಾರ್‌ಚಂದ್ರ, ಡಿವೈಎಸ್ ಪಿ ಹಾಗೂ ನಾಲ್ವರು ಇನ್ಸ್ ಪೆಕ್ಟರ್ ಗಳ ತಂಡದಿಂದ ದಾಳಿ ನಡೆದಿದೆ.
ಅಬಕಾರಿ ಉಪ ಆಯುಕ್ತೆ ಎಂ.ರೂಪಾ ಅವರ ಕಚೇರಿ, ಕಾರವಾರ ಹಾಗೂ ಉಡುಪಿಯ ಮನೆವಳ ಮೇಲೆ ಉಡುಪಿ ಲೋಕಾಯುಕ್ತ ಡಿವೈಎಸ್ ಪಿ ತಂಡದಿಂದ ದಾಳಿ ನಡೆದಿದ್ದು, ದಾಖಲೆಗಳನ್ನು ಕಲೆ ಹಾಕಲಾಗುತ್ತಿದೆ‌.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net