ಉಪ್ಪಿನಂಗಡಿ (ದ.ಕ.): ಕರಾವಳಿ ಮೇಲೆ ಉಗ್ರಾತಂಕದ ಕಾಮೋಡ ಕವಿದಿರುವ ನಡುವೆಯೇ ಇಲ್ಲಿನ 34ನೇ ನೆಕ್ಕಿಲಾಡಿ ಎಂಬಲ್ಲಿಂದ ಜು.18ರಿಂದ ನಾಪತ್ತೆಯಾಗಿದ್ದಾತ ಉಗ್ರ ನಂಟು ಹೊಂದಿದ್ದು, ದೆಹಲಿಯಲ್ಲಿ ಬಂಧಿತನಾಗಿರುವ ಸುದ್ದಿ ಹಬ್ಬಿದೆ. ಆದರೆ ಜಿಲ್ಲಾ ಪೊಲೀಸರು ಈ ಬಗ್ಗೆ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 48 ವರ್ಷದ ಉತ್ತರ ಪ್ರದೇಶದ ನಿವಾಸಿ ಕಾರ್ಯನಿಮಿತ್ತ ಜು.18ರಂದು ಬೆಂಗಳೂರಿಗೆ ಹೋಗುತ್ತೇನೆಂದು ತಿಳಿಸಿದ್ದ. ಬಳಿಕ ನಾಪತ್ತೆಯಾಗಿರುವುದಾಗಿ ಆತನ ಪತ್ನಿ, ಆಗಸ್ಟ್ ಮೊದಲ ವಾರ ಪೊಲೀಸರಿಗೆ ದೂರು ನೀಡಿದ್ದರು. ಆತ ಉಗ್ರ ಕೃತ್ಯದಲ್ಲಿ ಬಂಧಿತನಾಗಿದ್ದಾನೆಂಬ ಮಾಹಿತಿ ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ. ದೆಹಲಿ ವಿಶೇಷ ಪೊಲೀಸ್ ತಂಡದ ವಶದಲ್ಲಿರುವ ಆರು ಉಗ್ರರ ಪೈಕಿ ಈತನೂ ಇರುವನೆಂದು ಹೇಳಲಾಗಿದೆ. ನೆಕ್ಕಿಲಾಡಿ ಪರಿಸರದಲ್ಲಿ ಗ್ಯಾರೇಜ್ ಹೊಂದಿದ್ದ ಈತ ಸದಾ ಸಾಮಾಜಿಕ ಜಾಲತಾಣದಲ್ಲಿ ವ್ಯಸ್ತನಾಗಿರುತ್ತಿದ್ದ.
ಐಎಸ್ಐ ಏಜೆಂಟ್ಗಳು ಈ ಹಿಂದೆ ದೆಹಲಿ ಹಾಗೂ ಆಂಧ್ರಪ್ರದೇಶದಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಮಿಲಿಟರಿಯಲ್ಲಿದ್ದ ಇಬ್ಬರನ್ನು ಫೇಸ್ಬುಕ್ ಮೂಲಕ ಹನಿಟ್ರಾ್ಯಪ್ಗೆ ಬೀಳಿಸಿದ್ದರು. ಈ ಬಗ್ಗೆ ಮಿಲಿಟರಿ ಇಂಟಲಿಜೆನ್ಸ್ ಅಧಿಕಾರಿಗಳು ತನಿಖೆಯನ್ನು ಮುಂದುವರಿಸಿದಾಗ ಜಿತೇಂದರ್ ಬಗ್ಗೆ ಸುಳಿವು ಸಿಕ್ಕಿತ್ತು. ಈತ ಪಾಕಿಸ್ತಾನದ ಐಎಸ್ಐಗಳಿಗೆ ಸೇನಾ ನೆಲೆಗಳ ಫೋಟೋ ಕಳುಹಿಸುತ್ತಿದ್ದನಾ ? ಅಥವಾ ಯುವತಿಯ ಆಕರ್ಷಣೆಗೆ ಒಳಗಾಗಿ ಕೃತ್ಯ ಎಸಗಿದ್ದಾನೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಐಎಸ್ಐ ಸಂಪರ್ಕಿಸಿದ್ದ: ಕಳೆದ ಸೆ.5ರಿಂದ ವಾಟ್ಸ್ಆಪ್ನಲ್ಲಿ ಐಎಸ್ಐ ಏಜೆಂಟ್ಗಳ ಜತೆ ಚಾಟ್ ಮಾಡಿರುವುದು ಹಾಗೂ ದೇಶದ ಸೂಕ್ಷ್ಮ ಪ್ರದೇಶಗಳ ಫೋಟೊ ಕಳುಹಿಸಿರುವ ದಾಖಲೆ ಸಿಸಿಬಿ ಕೈ ಸೇರಿದೆ. ಆದರೆ, ಸೆ.5ರ ಮೊದಲು ಐಎಸ್ಐ ಜತೆಗೆ ಚಾಟ್ ಮಾಡಿರುವುದು ಹಾಗೂ ಮೆಸೇಜ್ ಕಳುಹಿಸಿರುವ ವಿವರಗಳನ್ನು ಜಿತೇಂದರ್ ಡಿಲೀಟ್ ಮಾಡಿರುವುದುತನಿಖೆಯಲ್ಲಿ ಗೊತ್ತಾಗಿದೆ. ಹೀಗಾಗಿ ಆತನ ಮೊಬೈಲ್ನಿಂದ ಕಳೆದ ಒಂದು ವರ್ಷದಿಂದ ವಿದೇಶಗಳಿಗೆ ಹೋಗಿರುವ ಕರೆಗಳು ಹಾಗೂ ವಿದೇಶಗಳಿಂದ ಆತನ ಮೊಬೈಲ್ಗೆ ಬಂದಿರುವ ಕರೆಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ. ಜಿತೇಂದರ್ ಸಿಂಗ್ ಬೆಂಗಳೂರಿನಲ್ಲಿ ಬಟ್ಟೆ ವ್ಯಾಪಾರ ನಡೆಸುವುದರ ಜತೆಗೆ ಯಾವೆಲ್ಲ ಚಟುವಟಿಕೆಯಲ್ಲಿ ತೊಡಗಿದ್ದ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ವಾಟ್ಸ್ಆ್ಯಪ್ನಲ್ಲೇ ಮಾಹಿತಿ ಸಂಗ್ರಹ: ಫೇಸ್ಬುಕ್ನಲ್ಲಿ ಪೂಜಾ ಜಿ ಎಂಬ ಯುವತಿಯ ಹೆಸರಿನಲ್ಲಿ ಜಿತೇಂದರ್ನನ್ನು ಪರಿಚಯಿಸಿಕೊಂಡು ಪಾಕಿಸ್ತಾನದ ಐಎಸ್ಐ ಏಜೆಂಟ್ಗಳು ಸುಲಭವಾಗಿ ಭಾರತದ ಸೇನಾ ನೆಲೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಮುಂದಾಗಿದ್ದರು. ಫೇಸ್ಬುಕ್ನಲ್ಲಿ ಪರಿಚಯವಾದ ಬಳಿಕ ಜಿತೇಂದರ್ ನಂಬರ್ ಪಡೆದಿದ್ದ ಐಎಸ್ಐ ಏಜೆಂಟ್ಗಳು ತಮ್ಮ ವಾಟ್ಸ್ಆಪ್ ನಂಬರ್ನ್ನು ಆತನೊಂದಿಗೆ ಹಂಚಿಕೊಂಡಿದ್ದರು.
ಇನ್ನೂ ಹಲವರ ಕೈವಾಡ?: ಪಾಕಿಸ್ತಾನದ ಐಎಸ್ಐ ಏಜೆಂಟ್ಗಳು ಯುವತಿಯರನ್ನು ಬಳಸಿ ಫೇಸ್ಬುಕ್ನಂತಹ ಸಾಮಾಜಿಕ ಜಾಲತಾಣ ದುರ್ಬಳಕೆ ಮಾಡಿಕೊಂಡು ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿರುವವರನ್ನು ತಮ್ಮ ಬಲೆಗೆ ಬೀಳಿಸಲು ಯತ್ನಿಸುತ್ತಿದ್ದಾರೆ. ಜಿತೇಂದರ್ ಮಾದರಿಯಲ್ಲೇ ಇನ್ನೂ ಹಲವು ಮಂದಿ ಐಎಸ್ಐ ಏಜೆಂಟ್ಗಳ ಸಂಪರ್ಕದಲ್ಲಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ತನಿಖಾ ಸಂಸ್ಥೆಗಳು ತನಿಖೆ ಚುರುಕುಗೊಳಿಸಿವೆ.
ಹಿಂದಿ, ಉರ್ದುವಿನಲ್ಲಿ ಮಾತನಾಡುತ್ತಿದ್ದ ಈತ, ಫೋನ್ ಬಂದರೆ ಸ್ಥಳೀಯರಿಗೆ ತಿಳಿದಿರದ ಯಾವುದೋ ಭಾಷೆಯಲ್ಲಿ ಮಾತನಾಡುತ್ತಿದ್ದ. ಕೆಲವು ಕರೆಗಳು ಬಂದಾಗ ಹೆದ್ದಾರಿಯುದ್ದಕ್ಕೂ ನಡೆದುಕೊಂಡು, ದೂರ ಹೋಗಿ ಸಂಭಾಷಣೆ ನಡೆಸುತ್ತಿದ್ದುದಾಗಿ ಸ್ಥಳೀಯರು ತಿಳಿಸಿದ್ದಾರೆ. ಒಂದು ದಿನ ಅಸ್ವಸ್ಥನಾಗಿದ್ದ ಆತನನ್ನು ಸ್ಥಳೀಯರು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದರು. ಚಿಕಿತ್ಸೆ ಮುಗಿಸಿ ಬಿಲ್ ಪಾವತಿ ವೇಳೆ ಆತನ ಬ್ಯಾಂಕ್ ಖಾತೆಗೆ 1.75 ಲಕ್ಷ ರೂ. ಹಣ ಜಮೆಯಾಗಿತ್ತೆಂಬ ಮಾಹಿತಿ ಇದೆ. ಆತ ಊರಿಗೆ ಅಪರಿಚಿತ. ಸ್ಥಳೀಯರೇ 2019ರಲ್ಲಿ ಆತನಿಗೆ ಯುವತಿಯೊಬ್ಬಳನ್ನು ಗೊತ್ತುಪಡಿಸಿ ಮದುವೆ ಮಾಡಿಸಿ ಅಗತ್ಯ ದಾಖಲೆ ಒದಗಿಸುವಲ್ಲಿಯೂ ನೆರವಾಗಿದ್ದರು.
ನೆಕ್ಕಿಲಾಡಿಯಲ್ಲಿ ನಾಪತ್ತೆಯಾಗಿರುವಾತನ ಟೆರರ್ ಲಿಂಕ್ ಮತ್ತು ಆತ ದೆಹಲಿಯಲ್ಲಿ ಬಂಧಿತನಾಗಿರುವ ಬಗ್ಗೆ ನಮಗೆ ಮಾಹಿತಿ ಇಲ್ಲ.| ಋಷಿಕೇಶ್ ಸೋನಾವಣೆ ಎಸ್ಪಿ, ದ.ಕ.