ಕಾರವಾರ: ಮತ್ಸ್ಯಗಂಧ ಎಕ್ಸ್ಪ್ರೆಸ್‌ರೈಲುಗಳಿಗೆ (New coaches) ಹೊಸ ಕೋಚ್‌ಗಳು ಜೋಡಣೆಯಾಗಲಿವೆ.
ಉತ್ತರ ಕನ್ನಡ ಸೇರಿ ದೇಶದ ಪಶ್ಚಿಮ ಕರಾವಳಿಯ ಪ್ರಮುಖ ಸಂಪರ್ಕದ ಕೊಂಡಿ ಕೊಂಕಣ ರೈಲಿನಲ್ಲಿ ಓಡಾಡುವ ಈ ಪ್ರಮುಖ ರೈಲು ಮುಂದಿನ ವಾರದಿಂದ ಹೊಸ ಬಣ್ಣ, ವೇಷದೊಂದಿಗೆ ಸಂಚರಿಸಲಿದೆ.
ಉತ್ತರ ಕನ್ನಡದ ಹಿಂದಿನ ಉಸ್ತುವಾರಿ ಸಚಿವ, ಪ್ರಸ್ತುತ ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಪ್ರಯತ್ನದಿಂದ ರೈಲ್ವೆ ಇಲಾಖೆ ಮತ್ಸ್ಯಗಂಧ ಎಕ್ಸ್ಪ್ರೆಸ್ ರೈಲಿಗೆ ಹೊಸ ಕೋಚ್ (New coaches) ಅಳವಡಿಸುತ್ತಿದೆ.
ಹೊಸ ಕೋಚ್‌ಗಳು (New coaches) ಫೆಬ್ರವರಿ 17 ರಿಂದ ಹೊಸ ಪ್ರಯಾಣವನ್ನು ಆರಂಭಿಸಲಿವೆ. ಅತ್ಯುನ್ನತ ಜರ್ಮನ್ ತಂತ್ರಜ್ಞಾನದಲ್ಲಿ ಎಲ್‌ಎಚ್‌ಬಿ ತಂತ್ರಜ್ಞಾನದಲ್ಲಿ ಕೋಚ್‌ಗಳನ್ನು ರಚಿಸಲಾಗಿದ್ದು, ಅವು ನಳನಳಿಸುತ್ತಿವೆ ಎಂದು ಕೋಟ ಶ್ರೀನಿವಾಸ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಧುನಿಕ ತಂತ್ರಜ್ಞಾನದ ಕೋಚ್‌ಗಳನ್ನು ಹೊಂದಿರುವ ಈ ರೈಲು ಅಪಘಾತವಾದರೂ ಜನರು ಸುರಕ್ಷಿತವಾಗಿರುತ್ತಾರೆ. ಯಾವುದೇ ಅಪಘಾತ ಸಂಭವಿಸಿದರೂ ಕೋಚ್‌ಗಳು ಪಲ್ಟಿ ಆಗದೆ, ಜಿಗ್‌ಜಾಗ್ ರೀತಿಯಲ್ಲಿ ವರ್ಗೀಕರಿಸಿ ನಿಂತುಬಿಡುತ್ತದೆ.
ಈ ಹೊಸ ಕೋಚ್‌ನ ರೈಲಲ್ಲಿ ಶಬ್ದದ ಸಮಸ್ಯೆ ಕಡಿಮೆಯಾಗುತ್ತದೆ. ರೈಲು ಓಡಾಟದ ಸಂದರ್ಭದಲ್ಲಿ ಹಿಂದಿಗಿಂತ ಶಬ್ದವನ್ನು ಕಡಿಮೆಗೊಳಿಸುತ್ತದೆ. ಶೌಚಗೃಹ ವ್ಯವಸ್ಥೆಯೂ ಸಂಪೂರ್ಣವಾಗಿ ಬದಲಾಗಿದ್ದು ಆಧುನಿಕ ಶೈಲಿಯನ್ನು ಅಳವಡಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಲ್ ಹಾಗೂ ಮಂಗಳೂರು ಸೆಂಟ್ರಲ್ ನಡುವೆ ಮತ್ಸ್ಯಗಂಧ ಎಕ್ಸ್ಪ್ರೆಸ್ ರೈಲು (12620/12619) ರೈಲು ಓಡಾಟ ನಡೆಸುತ್ತದೆ. ಕರಾವಳಿಯ ಪ್ರಮುಖ 22 ನಿಲ್ದಾಣಗಳನ್ನು ಇದು ಹಾದು ಪ್ರತಿ ದಿನ ಕನಿಷ್ಠ 1 ಸಾವಿರ ಜನರನ್ನು ಸಾಗಿಸುತ್ತದೆ.
2ಟೈರ್ ಎಸಿ- 2ಬೋಗಿಗಳು, 3ಟೈರ್ ಎಸಿಯ-4, ಇಕಾನಮಿ ಕ್ಲಾಸ್ ಬೋಗಿಗಳು 4, 8 ಸ್ಲೀಪರ್ ನಾಲ್ಕು ಜನರಲ್ ಸೇರಿ ಒಟ್ಟು 23 ಬೋಗಿಗಳು ಮತ್ಸ÷್ಯಗಂಧ ಎಕ್ಸ್ಪ್ರೆಸ್‌ನ ಎರಡು ರೈಲುಗಳಿಗಿವೆ.
ಅಂದಿನ ಕೇಂದ್ರ ಸಚಿವ ಜಾರ್ಜ್ ಫರ್ನಾಂಡಿಸ್ ಅವರ ವಿಶೇಷ ಕಾಳಜಿಯಿಂದ 1998 ರ ಮೇ 1 ರಂದು ಮುಂಬೈ, ಮಂಗಳೂರು ನಡುವೆ ಮತ್ಸ್ಯಗಂಧ ರೈಲು ಆರಂಭಗೊಂಡಿತು.
ಗೋವಾ, ಮಹಾರಾಷ್ಟ್ರದ ಜತೆ ನಿಕಟ ಸಂಪರ್ಕ ಹೊಂದಿರುವ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜನರ ನಿರಂತರ ಓಡಾಟದ ರೈಲು ಇದಾಗಿದ್ದು, ಜಿಲ್ಲೆಯ ಬಹುತೇಕ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿತ್ತು.
ಇದರಿಂದ ಮತ್ಸ್ಯಗಂಧ ರೈಲಿನ ಜತೆ ಕರ್ನಾಟಕ ಕರಾವಳಿಯ ಜನ ಭಾವನಾತ್ಮಕ ಸಂಬಂಧ ಹೊಂದಿದ್ದರು. 28 ವರ್ಷಗಳಿಂದ ಅದೇ ರೈಲು ಬೋಗಿಗಳು ಓಡಾಟ ನಡೆಸಿವೆ. ಅವು ಸಾಕಷ್ಟು ಹಳೆಯದಾಗಿದ್ದು, ಶಿಥಿಲವಾಗಿದ್ದವು.
ಇಂಜಿನ್ ಕೂಡ ಹಾಳಾಗಿ ಅಲ್ಲಲ್ಲಿ ಕೆಟ್ಟು ನಿಲ್ಲುತ್ತಿತ್ತು. ಇತ್ತೀಚೆಗೆ ಇಂಜಿನ್‌ನ್ನು ಇಲೆಕ್ಟ್ರಿಕ್ ಲೋಕೋಮೋಟಿವ್‌ಗೆ ಬದಲಾಯಿಸಲಾಗಿದೆ. ಈಗ ಕೋಚ್‌ಗಳನ್ನೂ ಬದಲಾಯಿಸಲಾಗುತ್ತಿದೆ.
ಇದನ್ನೂ ಓದಿ: https://www.vijayavani.net/president-of-dandeli-sahitya-sammelanahttps://youtube.com/shorts/_26jN7UjYqc?feature=share
ಕೊಂಕಣ ರೈಲ್ವೆಯಲ್ಲಿ ಅತಿ ಹೆಚ್ಚು ಪ್ರಯಾಣಿಕರನ್ನು ಒಯ್ಯುವ ರೈಲು ಭಾಗಶಃ ಶಿಥಿಲಾವಸ್ಥೆಗೆ ಬಂದಿದೆ. ಅದನ್ನು ಬದಲಾಯಿಸಬೇಕು ಎಂದು ಅನೇಕ ಪ್ರಯಾಣಿಕರು, ವಿಡಿಯೋ ಮೂಲಕ ಮನವಿ ಮಾಡಿದ್ದರು. ಅದರಂತೆ ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಹಾಗೂ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಮಾಡಿದ್ದೆ. ನನ್ನ ಮನವಿಗೆ ಸ್ಪಂದಿಸಿ, ಕೋಚ್‌ಗಳನ್ನು ಬದಲಾಯಿಸಲು ಸಚಿವರು ಆದೇಶ ನೀಡಿದ್ದಾರೆ.
ಕೋಟ ಶ್ರೀನಿವಾಸ ಪೂಜಾರಿಸಂಸದ