ಜಿಲ್ಲೆ

ಟೀಕೂ ನೂತನ ಅಡ್ಮಿರಲ್ ಸುಪರಿಂಟೆಂಡೆಂಟ್

Uttara Kannada - Subash Hegde

ಕಾರವಾರ: ರಿಯರ್ ಅಡ್ಮಿರಲ್ ಅಶ್ವಿನಿ ಟೀಕೂ ಅವರು ಕಾರವಾರ ಕದಂಬ ನೌಕಾನೆಲೆಯ ಯುದ್ಧ ಹಡಗುಗಳ ರಿಪೇರಿ ಪ್ರಾಂಗಣದ ನೂತನ ಮುಖ್ಯಸ್ಥರಾಗಿ (ಅಡ್ಮಿರಲ್ ಸೂಪರಿಂಟೆಂಡೆಂಟ್) ಅಧಿಕಾರ ವಹಿಸಿಕೊಂಡಿದ್ದಾರೆ. ಇದುವರೆಗೆ ರಿಯರ್ ಅಡ್ಮಿರಲ್ ಡಿ.ಕೆ.ಗೋಸ್ವಾಮಿ ಈ ಹುದ್ದೆಯಲ್ಲಿದ್ದರು.

ಇದನ್ನೂ ಓದಿ: ಕೆಪಿಸಿ ಇಂಜಿನಿಯರ್‌ ವರ್ಗಾವಣೆಗೆ ಶಾಸಕ ಸೈಲ್‌ ಶಿಫಾರಸು
ನೇವಲ್ ಕಾಲೇಜ್ ಆಫ್ ಇಂಜಿನಿಯರಿಂಗ್ ಐಎನ್‌ಎಸ್ ಶಿವಾಜಿಯಲ್ಲಿ ನಲ್ಲಿ ಓದಿದ ಟೀಕೂ ಅವರು 1991 ರಲ್ಲಿ ಭಾರತೀಯ ನೌಕಾಸೇನೆ ಸೇರಿದ್ದರು. ಐಎನ್‌ಎಸ್ ಮುಂಬೈ, ಐಎನ್‌ಎಸ್ ಮೈಸೂರು, ಐಎನ್‌ಎಸ್ ರಂಜಿತ್ ಮುಂತಾದೆಡೆ ಅವರು ಕಾರ್ಯನಿರ್ವಹಿಸಿದ್ದಾರೆ.