ಬಂಟ್ವಾಳದಲ್ಲಿ ನೇತ್ರಾವತಿ ನದಿಯ ನೀರಿನ ಮಟ್ಟ ಶನಿವಾರ ಬೆಳಗ್ಗೆ ಏರಿಕೆಯಾಗಿರುವುದು 
ಜಿಲ್ಲೆ

ನೇತ್ರಾವತಿ ನದಿ ಗರಿಷ್ಠ ನೀರಿನ ಮಟ್ಟ

ಇಂದಿರಾ ಎನ್ ಕೆ

ಬಂಟ್ವಾಳ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯ ಪರಿಣಾಮ ನೇತ್ರಾವತಿ ನದಿ ನೀರಿನ ಮಟ್ಟದಲ್ಲಿ ಶನಿವಾರ ಬೆಳಗ್ಗೆ ಹೆಚ್ಚಳವಾಗಿದೆ. ಸುಮಾರು 6.1 ಮೀ. ಎತ್ತರದಲ್ಲಿ ನದಿ ಹರಿಯುತ್ತಿದ್ದು, ಪ್ರಸಕ್ತ ವರ್ಷದಲ್ಲಿ ದಾಖಲಾದ ಗರಿಷ್ಠ ನೀರಿನ ಮಟ್ಟ ಇದಾಗಿದೆ. ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದ್ದು, ನದಿ ಸಮೀಪದ ಭಾಗಗಳಲ್ಲಿ ವಾಸಿಸುವವರು ಹಾಗೂ ಪ್ರತಿ ಬಾರಿ ತೊಂದರೆಗೆ ಒಳಗಾಗುವವರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಆಡಳಿತ ತಿಳಿಸಿದೆ. ಕೆಲವು ದಿನಗಳ ಹಿಂದೆ ಭಾರಿ ಮಳೆಯಾದಾಗಲೂ ನೀರಿನ ಮಟ್ಟ ಗರಿಷ್ಠ 4.2 ಮೀ. ತನಕ ಏರಿಕೆಯಾಗಿತ್ತು. ಈ ಭಾಗದಲ್ಲಿ ಅಪಾಯದ ಮಟ್ಟ 8.5 ಮೀ. ಆಗಿದ್ದು, ಸುಮಾರು 8 ಮೀ. ಎತ್ತರಕ್ಕೆ ಏರಿಕೆಯಾದಾಗ ನೀರು ಸಮೀಪದ ತಗ್ಗು ಪ್ರದೇಶಗಳಿಗೆ ನುಗ್ಗುತ್ತದೆ.