ಬೆಥನಿ ವಿದ್ಯಾಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆ ನಡೆಸಲಾಯಿತು.ಶಿಕ್ಷಕರ-ರಕ್ಷಕ ಸಂಘದ ಅಧ್ಯಕ್ಷ ಜಯಾನಂದ ಬಂಟ್ರಿಯಲ್, ಫಾತಿಮಾತ್ ಅಪ್ನ ಇದ್ದರು. 
ಜಿಲ್ಲೆ

ಮರಗಳಿಲ್ಲದಿದ್ದರೆ ನೀರಿನ ಕೊರತೆ :ಬೆಥನಿ ವಿದ್ಯಾಸಂಸ್ಥೆಯಲ್ಲಿ ಜಯಾನಂದ ಬಂಟ್ರಿಯಲ್ ಹೇಳಿಕೆ

ಸೌಮ್ಯ ಆರ್

ನೆಲ್ಯಾಡಿ: ವಿಶ್ವ ಪರಿಸರ ದಿನಾಚರಣೆಯನ್ನು ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯ ವಠಾರದಲ್ಲಿ ಬುಧವಾರ ಆಚರಿಸಲಾಯಿತು. ವಿದ್ಯಾ ಸಂಸ್ಥೆಯ ಪ್ರಾಂಶುಪಾಲ ಡಾ.ವರ್ಗೀಸ್ ಕೈಪನಡುಕ ಮಾರ್ಗದರ್ಶನದಲ್ಲಿ ಸಂಸ್ಥೆಯ ಸಂಚಾಲಕ ಫಾ.ಜೈಸನ್ ಸೈಮನ್ ಒಐಸಿ ಅಧ್ಯಕ್ಷತೆಯಲ್ಲಿ ನಡೆಯಿತು.

ಶಿಕ್ಷಕರ-ರಕ್ಷಕ ಸಂಘದ ಅಧ್ಯಕ್ಷ ಜಯಾನಂದ ಬಂಟ್ರಿಯಲ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಗಿಡವನ್ನು ನೆಟ್ಟು ಪರಿಸರದ ಮಹತ್ವದ ಬಗ್ಗೆ ವಿವರಿಸುತ್ತ ಮರಗಳನ್ನು ನೆಟ್ಟು ಬೆಳೆಸದಿದ್ದರೆ ಮುಂದಿನ ದಿನಗಳಲ್ಲಿ ಶುದ್ಧ ಪರಿಸರ ನಾಶವಾಗುವುದರೊಂದಿಗೆ ನೀರಿನ ಕೊರತೆ ಉಂಟಾಗಬಹುದು. ಆದುದರಿಂದ ಪ್ರತಿಯೊಬ್ಬರೂ ಒಂದೊಂದು ಗಿಡಗಳನ್ನು ತಮ್ಮ ಮನೆಯಲ್ಲಿ ನೆಟ್ಟು ಬೆಳೆಸಬೇಕೆಂದು ಹೇಳಿದರು. ಫಾತಿಮಾತ್ ಅಪ್ನ ನಿರೂಪಿಸಿದರು.