ಜಿಲ್ಲೆ

ಮಂಡಲ ಕಾಂಗ್ರೆಸ್‌ನಿಂದ ನೆಹರು ಜನ್ಮ ದಿನಾಚರಣೆ

Avinash R

ಮಂಜೇಶ್ವರ: ಮೀಂಜ ಮಂಡಲ ಕಾಂಗ್ರೆಸ್ ಸಮಿತಿ ವತಿಯಿಂದ ಭಾರತದ ಪ್ರಥಮ ಪ್ರಧಾನ ಮಂತ್ರಿ ಪಂಡಿತ್ ಜವಾಹರಲಾಲ್ ನೆಹರು ಅವರ 135ನೇ ಜನ್ಮ ದಿನಾಚರಣಾ ಕಾರ್ಯಕ್ರಮ ಮೀಯಪದವಿನಲ್ಲಿ ಗುರುವಾರ ಜರುಗಿತು.

ಕಾಸರಗೋಡು ಜಿಲ್ಲಾ ಪಂಚಾಯಿತಿ ಸದಸ್ಯೆ ಕಮಲಾಕ್ಷಿ ಕೆ.ಉದ್ಘಾಟಿಸಿದರು. ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದಾಮೋದರ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಅಬ್ದುಲ್ ಖಾದರ್ ಹಾಜಿ ತಲೇಕಳ, ಪಳ್ಳಿಕುಂಞ್ಞೆ ತಳೇಕಳ, ಹನೀಫ್ ಎಚ್.ಎ., ಶೇಖ್ ಅಬ್ಬಾಸ್, ಸೀತಾರಾಮ ಬೆರಿಕೆ, ಶಾಫಿ ತಲೇಕಳ, ಹಮೀದ್ ಕಣಿಯೂರು, ಮೊಹಮ್ಮದ್ ಮೀಯಪದವು, ರಿತೇಶ್ ಕುಳಬೈಲ್, ಫ್ರಾನ್ಸಿಸ್ ಕುಳಬೈಲ್, ರೋನಿ ಮೀಯಪದವು, ಫಿಲೋಮಿನಾ ಮೊಂತೇರೋ, ಶರ್ಮಿಳಾ ಪಿಂಟೋ, ಮಿಸ್ರಿಯಾ ಜೆ.ಬೆಜ್ಜ, ಇಬ್ರಾಹಿಂ ಕಾನ ಮುಂತಾದವರು ಉಪಸ್ಥಿತರಿದ್ದರು.