ಬೆಳ್ತಂಗಡಿ: ಯಾವುದೇ ಸಾಧನೆ ಮಾಡಲು ಏಕಾಗ್ರತೆ ಬೇಕು. ಏಕಾಗ್ರತೆ, ಇಚ್ಛಾ ಶಕ್ತಿ ಸಾಧಕನಿಗೆ ಇರಬೇಕಾದ ಎರಡು ಪ್ರಮುಖ ಅರ್ಹತೆಗಳು ಎಂದು ಭಾರತೀಯ ಸೇನೆಯ ವಿಶ್ರಾಂತ ಮೇಜರ್ ಜನರಲ್ ಎಂ.ವಿ.ಭಟ್ ಹೇಳಿದರು.
ವಿದ್ಯಾ ಸಾಗರ ಕ್ಯಾಂಪಸ್‌ನಲ್ಲಿ ಗುರುವಾಯನಕೆರೆ ಎಕ್ಸೆಲ್ ಪದವಿಪೂರ್ವ ಕಾಲೇಜಿನ ಎನ್‌ಡಿಎ ತರಗತಿಗಳ ಓರಿಯಂಟೇಶನ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶ ಸೇವೆ ಮಾಡುವ ಉನ್ನತ ಮಟ್ಟದ ಅವಕಾಶ, ಎನ್‌ಡಿಎ ಕ್ಲೀಯರ್ ಮಾಡಿದ ವಿದ್ಯಾರ್ಥಿಗಳಿಗೆ ಲಭಿಸುತ್ತದೆ. ಹೀಗಾಗಿ ಎನ್‌ಡಿಎ ಪರೀಕ್ಷೆಗಳನ್ನು ಗಂಭೀರವಾಗಿ ಸ್ವೀಕರಿಸಿ ಎಂದರು.
ಪ್ರಾಂಶುಪಾಲ ಡಾ.ನವೀನ್ ಕುಮಾರ್ ಮರಿಕೆ ಮಾತನಾಡಿ, ದೇಶ ಸೇವೆಯೇ ಈಶ ಸೇವೆ ಎಂದು ತಿಳಿದು ಬದುಕಲು ಎನ್‌ಡಿಎ ತರಬೇತಿ ಅವಕಾಶ ಮಾಡಿಕೊಡುತ್ತದೆ ಎಂದರು.
ಎನ್‌ಡಿಎ ಸಂಯೋಜಕ ಜೋಸ್ಟಮ್ ಎ.ಟಿ. ಎನ್‌ಡಿಎ ತರಬೇತಿ ಬಗ್ಗೆ ತಿಳಿಸಿದರು. ವಿದ್ಯಾರ್ಥಿಗಳಾದ ವರ್ಷಾ ಎನ್. ಸ್ವಾಗತಿಸಿದರು. ರಕ್ಷಾ ವೆಂಕಟ್, ರೀತು ಕೆ. ಕಾರ್ಯಕ್ರಮ ನಿರೂಪಿಸಿದರು. ಸುಧನ್ವ ವಂದಿಸಿದರು.