ಜಿಲ್ಲೆ

ಸತೀಶ ಕೆ.ಎಂ.ಗೆ ಎನ್‌ಸಿಸಿ ಲೆಫ್ಟಿನೆಂಟ್ ಪದವಿ

ಬದಿಯಡ್ಕ: ನೀರ್ಚಾಲು ಕುಂಟಿಕಾನ ಮಠದ ಸತೀಶ ಕೆ.ಎಂ.ಅವರಿಗೆ ಎನ್‌ಸಿಸಿ ಲೆಫ್ಟಿನೆಂಟ್ ಪದವಿ ದೊರೆತಿದೆ. ಪ್ರಸ್ತುತ ಮಂಗಳೂರು ಕರ್ನಾಟಕ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದಲ್ಲಿ ವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕಾಲೇಜಿನ ಎನ್‌ಸಿಸಿ ಘಟಕದ ಅಸೋಸಿಯೇಟ್ ಎನ್‌ಸಿಸಿ ಆಫೀಸರ್(ಎಎನ್‌ಒ) ಆಗಿ ಕರ್ತವ್ಯ ಸಲ್ಲಿಸುತ್ತಿದ್ದಾರೆ. ನಿವೃತ್ತ ಶಿಕ್ಷಕ, ಹವ್ಯಾಸಿ ಯಕ್ಷಗಾನ ಕಲಾವಿದ ಕೆ.ಎಂ.ಶಾಮ ಭಟ್ ಮತ್ತು ಸರಸ್ವತಿ ದಂಪತಿಗಳ ಪುತ್ರ.