ಕಂಪ್ಲಿಯ ಜೆವಿಎಸ್‌ಎಸ್ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಜರುಗಿದ ಜವಾಹರ್ ನವೋದಯ ಪ್ರವೇಶ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಕೇಂದ್ರ ಮಟ್ಟದ ವೀಕ್ಷಕರಾದ ಪಿ.ನರೇಶಕುಮಾರ್, ಮೇಲ್ವಿಚಾರಕಿ ಸರಳಾ ಇತರರಿದ್ದರು. 
ಜಿಲ್ಲೆ

ಜವಾಹರ್ ನವೋದಯ ಎಕ್ಸಾಂಗೆ 23 ಪರೀಕ್ಷಾರ್ಥಿಗಳು ಗೈರು

Gangavati - Desk - Veeresh S Ullagaddi

ಕಂಪ್ಲಿ: ಪಟ್ಟಣದ ಜೆವಿಎಸ್‌ಎಸ್ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಶನಿವಾರ ಜವಾಹರ್ ನವೋದಯ ಪ್ರವೇಶ ಪರೀಕ್ಷೆ ನಡೆಯಿತು.

ಫ್ಲೈಯಿಂಗ್ ಸ್ಕ್ವಾಡ್ ಕೆ.ಎಸ್.ಮಲ್ಲನಗೌಡ ಪರೀಕ್ಷಾ ಕೇಂದ್ರಕ್ಕೆ ಭೇಟಿ

ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 112 ಗಂಡು, 134 ಹೆಣ್ಣು ಮಕ್ಕಳಲ್ಲಿ 10 ಗಂಡು, 13 ಹೆಣ್ಣು ಮಕ್ಕಳು ಸೇರಿ ಒಟ್ಟು 23 ಪರೀಕ್ಷಾರ್ಥಿಗಳು ಗೈರಾಗಿದ್ದರು. ಫ್ಲೈಯಿಂಗ್ ಸ್ಕ್ವಾಡ್ ತಾಪಂ ಇಒ ಕೆ.ಎಸ್.ಮಲ್ಲನಗೌಡ, ಇಸಿಒ ಜಿ.ವೀರೇಶ್ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಪರೀಕ್ಷಾ ಮುಖ್ಯ ಅಧೀಕ್ಷಕರಾಗಿ ಪ್ರಾಚಾರ್ಯ ಬಸವರಾಜ ಪಾಟೀಲ್, ಕೇಂದ್ರ ಮಟ್ಟದ ವೀಕ್ಷಕರಾದ ಗಾಯತ್ರಿದೇವಿ, ಪಿ.ನರೇಶಕುಮಾರ್ ಕಾರ್ಯನಿರ್ವಹಿಸಿದರು. ಆರೋಗ್ಯ ನಿರೀಕ್ಷಣಾಧಿಕಾರಿ ಎನ್.ಚನ್ನಬಸವರಾಜ, ಆಶಾ ಕಾರ್ಯಕರ್ತೆ ಶಾರದಾ ಪರೀಕ್ಷಾರ್ಥಿಗಳ ಆರೋಗ್ಯದ ಮೇಲೆ ನಿಗಾವಹಿಸಿದ್ದರು.