ಜಿಲ್ಲೆ

ಅಳ್ವೆಕೋಡಿಯಲ್ಲಿ ವಿಜೃಂಭಣೆಯ ನವರಾತ್ರಿ ನಾಳೆಯಿಂದ

Uttara Kannada - Subash Hegde

ಭಟ್ಕಳ:ತಾಲೂಕಿನ ಶಿರಾಲಿ ಅಳ್ವೆಕೋಡಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅ.15 ರಿಂದ 28 ರವರೆಗೆ ನವರಾತ್ರಿ ಉತ್ಸವ ವಿಜೃಂಭಣೆಯಿಂದ ಜರುಗಲಿದೆ.
ಈ ಅವಽಯಲ್ಲಿ ಪ್ರತಿ ದಿನ ಬೆಳಗ್ಗೆ ಪುಣ್ಯಾವಾಚನ, ಉದಯಾಸ್ತಮಾನ ಸೇವೆ ನಂತರ ಚಂಡಿಕಾ ಹವನ ನಡೆಯಲಿದೆ. ಶ್ರೀದೇವಿಗೆ ಸಂಪೂರ್ಣ ಅಲಂಕಾರ ಮಾಡಿ ಮಧ್ಯಾಹ್ನ 12.30 ಕ್ಕೆ ಮಹಾ ಮಂಗಳಾರತಿ ನಡೆಯಲಿದೆ. ಸಾಯಂಕಾಲ 5 ರಿಂದ 6 ಗಂಟೆಯವರೆಗೆ ನವರಾತ್ರಿ ವಿಶೇಷ ಪೂಜೆ, ಸಾಯಂಕಾಲ 6.30 ರಿಂದ ಸಾಂಸ್ಕೃತಿಕ ಭಜನಾ ಕಾರ್ಯಕ್ರಮ, ರಾತ್ರಿ 8 ಗಂಟೆಗೆ ಮಹಾ ಮಂಗಳಾರತಿ ಜರುಗಲಿದೆ. ಅ.18 ರಂದು ಲಲಿತಾ ಪಂಚಮಿ, ಅ.22 ರಂದು ದುರ್ಗಾಷ್ಟಮಿ, ಅ.23 ರಂದು ಮಹಾ ನವಮಿ, ಅ.24 ರಂದು ವಿಜಯ ದಶಮಿ ಜರುಗಲಿದೆ ಎಂದು ಅಳ್ವೆಕೋಡಿ ಸಾರ್ವಜನಿಕ ಟ್ರಸ್ಟ್ನ ಧರ್ಮದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.