ಜಿಲ್ಲೆ

ಪ್ರಕೃತಿ ಸಂರಕ್ಷಣೆ ಸಮಾಜದ ಜವಾಬ್ದಾರಿ

ಇಂದಿರಾ ಎನ್ ಕೆ

ಕೊಕ್ಕರ್ಣೆ: ಪ್ರಕೃತಿದತ್ತವಾದ ಗಾಳಿ, ಬೆಳಕು, ನೀರು ಮತ್ತು ಸಸ್ಯ ಸಂಪತ್ತನ್ನು ಆರಾಧಿಸಿದರೆ ದೇವರನ್ನು ಆರಾಧಿಸಿದಂತೆ. ಪ್ರಕೃತಿಯನ್ನು ಉಳಿಸಿ, ಬೆಳೆಸಿ ಸಂರಕ್ಷಿಸುವ ಜವಾಬ್ದಾರಿ ಸವಾಜದ ಮೇಲಿದೆ ಎಂದು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಹೇಳಿದರು.

ಪೇತ್ರಿ ಅನ್ನಪೂರ್ಣ ನರ್ಸರಿ ಪ್ರಾಯೋಜಕತ್ವದಲ್ಲಿ ‘ಹಸುರಿನತ್ತ ನಮ್ಮ ಚಿತ್ತ’ ಕಾರ್ಯಕ್ರಮದಡಿ ಪೇತ್ರಿಯ ಸುವಾರು ಒಂದು ಕಿ.ಮೀ. ವ್ಯಾಪ್ತಿಯ ದ್ವಿಪಥ ರಸ್ತೆಯ ವಿಭಜಕದಲ್ಲಿ ಅಲಂಕಾರಿಕ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಈ ಸಂದರ್ಭದಲ್ಲಿ ಶ್ಯಾಮ್‌ಪ್ರಸಾದ್ ಭಟ್ ದಂಪತಿಯನ್ನು ಸನ್ಮಾನಿಸಲಾಯಿತು. ಚೇರ್ಕಾಡಿ ಗ್ರಾಮ ಪಂಚಾಯಿತಿ, ಲಯನ್ಸ್ ಕ್ಲಬ್ ಪೇತ್ರಿ, ಉಡುಪಿ ಜಿಲ್ಲಾ ನರ್ಸರಿ ಅಸೋಸಿಯೇಟ್ಸ್, ಪೇತ್ರಿ ಸಮೃದ್ಧಿ ಮಹಿಳಾ ಮಂಡಳಿ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಪಂಚಾಯಿತಿ ಅಧ್ಯಕ್ಷ ನಾರಾಯಣ ನಾಯ್ಕ, ಲಯನ್ಸ್ ಅಧ್ಯಕ್ಷ ಚಂದ್ರ ನಾಯ್ಕ, ರಮೇಶ್ ನಾಯಕ್, ಯಶೋದಾ, ಪ್ರಸಾದ್ ಭಟ್, ಪ್ರಶಾಂತ್, ಪಂಚಾಯಿತಿ ಸದಸ್ಯರು, ಲಯನ್ಸ್ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ಕನ್ನಾರು ಕಮಲಾಕ್ಷ ಹೆಬ್ಬಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹರೀಶ್ ಶೆಟ್ಟಿ ಚೇರ್ಕಾಡಿ ಸ್ವಾಗತಿಸಿದರು. ಕೆ.ಎಸ್.ಪ್ರಸಾದ್ ವಂದಿಸಿದರು.