ಜಿಲ್ಲೆ

ಎನ್ನೆಸ್ಸೆಸ್‌ನಿಂದ ಸೇವಾ ಮನೋಭಾವ ವೃದ್ಧಿ : ಅಶೋಕ್ ಕುಮಾರ್ ಮೂಲೆಮಜಲು ಹೇಳಿಕೆ

ಸೌಮ್ಯ ಆರ್

ಸುಬ್ರಹ್ಮಣ್ಯ: ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆ ವೃದ್ಧಿಸುತ್ತದೆ ಎಂದು ನಿವೃತ್ತ ಪ್ರಾಂಶುಪಾಲ ಎಂ.ಬಿ.ಅಶೋಕ್ ಕುಮಾರ್ ಮೂಲೆಮಜಲು ಹೇಳಿದರು.

ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದ ಕೆ.ಎಸ್.ಎಸ್ ಕಾಲೇಜಿನಲ್ಲಿ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಚಟುವಟಿಕೆ ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದರು.

ಪ್ರಾಂಶುಪಾಲ ಡಾ.ದಿನೇಶ ಪಿ.ಟಿ. ಅಧ್ಯಕ್ಷತೆ ವಹಿಸಿದ್ದರು. ಐಕ್ಯುಎಸಿ ಸಂಯೋಜಕಿ ಲತಾ ಬಿ.ಟಿ, ಘಟಕದ ಯೋಜನಾಧಿಕಾರಿ ಸುಮಿತ್ರ, ಘಟಕದ ನಾಯಕರಾದ ನಿಶಾ ಗೌರಿ ಎಂ, ಯಕ್ಷ ಪಿ.ಎಸ್, ಜೀವನ್ ಎ, ಪ್ರದೀಪ್ ಸಿ.ವಿ ಉಪಸ್ಥಿತರಿದ್ದರು. ಯೋಜನಾಧಿಕಾರಿ ಆರತಿ ಕೆ. ಸ್ವಾಗತಿಸಿದರು. ಜೀವಿತ್ ಕಾರ್ಯಕ್ರಮ ನಿರೂಪಿಸಿದರು.