ಜಿಲ್ಲೆ

ನಾರಾಯಣಗುರುಗಳು ಪರಿವರ್ತನೆಯ ಹರಿಕಾರ : ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು ಅಭಿಪ್ರಾಯ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಬ್ರಹ್ಮಶ್ರೀ ನಾರಾಯಣಗುರುಗಳು ಪರಿವರ್ತನೆಯ ಹರಿಕಾರರಾಗಿದ್ದು, ಅವರು ಹಾಕಿಕೊಟ್ಟಿರುವ ಸತ್ಪಥದ ಮೂಲಕ ಸಾಗಿ ಸಮಾಜ ಕಟ್ಟುವ ಕೆಲಸದಲ್ಲಿ ನಾವೆಲ್ಲರೂ ತೊಡಗಿಸಿಕೊಳ್ಳುವುದು ಅನಿವಾರ್ಯ ಎಂದು ಬ್ರಹ್ಮಶ್ರೀ ನಾರಾಯಣಗುರು ಯುವ ವೇದಿಕೆ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷ ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು ಹೇಳಿದರು.

ಪೆರ್ಲದಲ್ಲಿ ಭಾನುವಾರ ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸೇವಾ ಸಂಘ ಪೆರ್ಲ ಘಟಕ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಬ್ರಹ್ಮಶ್ರೀ ನಾರಾಯಣಗುರುಗಳ 171ನೇ ಜಯಂತ್ಯುತ್ಸವದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

ಘಟಕ ಅಧ್ಯಕ್ಷ ಬಿ.ಪಿ.ಶೇಣಿ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಶ್ರೀ ನಾರಾಯಣಗುರು ಯುವ ವೇದಿಕೆ ಉಪಾಧ್ಯಕ್ಷ ಕೃಷ್ಣಪ್ಪ ಪೂಜಾರಿ ಬಡಾಜೆ, ಬಿಲ್ಲವ ಸೇವಾ ಸಂಘದ ಪೆರ್ಲ ಘಟಕ ಗೌರವಾಧ್ಯಕ್ಷ ಸುನಿತ್‌ಕುಮಾರ್ ಡಿ., ಮಾಜಿ ಅಧ್ಯಕ್ಷ ಚನಿಯಪ್ಪ ಪೂಜಾರಿ ಅಲಾರು, ಪೆರ್ಲ ಬಿಲ್ಲವ ಮಹಿಳಾ ಸಮಿತಿ ಅಧ್ಯಕ್ಷೆ ರುಕ್ಮಿಣಿ ಬೆದ್ರಂಪಳ್ಳ ಮುಖ್ಯ ಅತಿಥಿಗಳಾಗಿದ್ದರು.

ನಿವೃತ್ತ ಶಿಕ್ಷಕ ಉಮೇಶ್ ಕೆ.ಪೆರ್ಲ, ನಟಿ ಪ್ರಜ್ವಲಿ ಸುವರ್ಣ ಮುಗು ಅವರನ್ನು ಸನ್ಮಾನಿಸಲಾಯಿತು. ವಿವಿಧ ರಂಗಗಳಲ್ಲಿ ಸೇವೆ ಸಲ್ಲಿತ್ತಿರುವ ಬಿಲ್ಲವ ಮುಖಂಡರಾದ ಸುನೀತ್ ಕುಮಾರ್ ಡಿ., ಬಾಬು ಪೂಜಾರಿ ಕಾನ, ನರಸಿಂಹ ಪೂಜಾರಿ ವಾಣಿನಗರ, ಚನಿಯಪ್ಪ ಪೂಜಾರಿ ಅಲಾರು, ಸುಬ್ಬಣ್ಣ ಪೂಜಾರಿ ಬೆದ್ರಂಪಳ್ಳ, ಸದಾನಂದ ಬೈರಡ್ಕ, ಹರೀಶ, ಆನಂದ ಮಂಟಪ್ಪಾಡಿ, ರಾಮ್‌ಕುಮಾರ್ ಮುಂಡಿತಡ್ಕ, ದಿನೇಶ ಜಿ.ಕೆ.ಬಜಕೂಡ್ಲು, ಸಂಕಪ್ಪ ಪೂಜಾರಿ ಬಾಡೂರು ಪದವು ಅವರನ್ನು ಗೌರವಿಸಲಾಯಿತು. ಪ್ರತಿಭಾ ಪುರಸ್ಕಾರ, ಸಂಘದ ಮಹಿಳಾ ಘಟಕದಿಂಂದ ಭಜನೆ ನಡೆಯಿತು.

ರಾಜೇಶ್ವರಿ, ಲಲಿತಾ ಹಾಗೂ ಚಂಪಾವತಿ ಗುರುಸ್ತುತಿ ಮಾಡಿದರು. ಸಂಘದ ಕೋಶಾಧಿಕಾರಿ ಪದ್ಮನಾಭ ಸುವರ್ಣ ಬಜಕೂಡ್ಲು ಸ್ವಾಗತಿಸಿದರು. ಪುರುಷೋತ್ತಮ್ ಪೆರ್ಲ ಕಾರ್ಯಕ್ರಮ ನಿರೂಪಿಸಿದರು. ಅಖಿಲೇಶ್ ಕಾನ ವಂದಿಸಿದರು.