ಸಿಂಧನೂರು ತಾಲೂಕಿನ ದಢೇಸುಗೂರು ಕೃಷಿ ಸಂಶೋಧನಾ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಭತ್ತದ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಕೇಂದ್ರದ ಮುಖ್ಯಸ್ಥ ಡಾ.ರಮೇಶ ಮಾತನಾಡಿದರು. ರಾಯಚೂರು ಕೃಷಿ ವಿವಿ ಹಿರಿಯ ವಿಜ್ಞಾನಿ ಡಾ.ಅಜಯ್ ಕುಮಾರ, ಇಫ್ಕೋ ಕ್ಷೇತ್ರಾಧಿಕಾರಿ ಗೋವಿಂದರಾಜ, ಸಾಲಗುಂದ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಾಕೀರ್ ಹುಸೇನ್ ಇತರರಿದ್ದರು. 
ಜಿಲ್ಲೆ

ನ್ಯಾನೋ ಯೂರಿಯಾ ಬಳಸಿ

Kopala - Desk - Eraveni

ಸಿಂಧನೂರು: ಕೃಷಿಗೆ ನ್ಯಾನೋ ಗೊಬ್ಬರ ಬಳಕೆಯಿಂದ ಉತ್ತಮ ಬೆಳೆ ಪಡೆಯುವ ಜತೆಗೆ ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ ಎಂದು ರಾಯಚೂರು ಕೃಷಿ ವಿಜ್ಞಾನಗಳ ವಿವಿ ಹಿರಿಯ ವಿಜ್ಞಾನಿ ಡಾ.ಅಜಯ್ ಕುಮಾರ ಹೇಳಿದರು.

ತಾಲೂಕಿನ ದಢೇಸುಗೂರು ಕೃಷಿ ಸಂಶೋಧನಾ ಕೇಂದ್ರದಲ್ಲಿ ಭಾನುವಾರ ಆಯೋಜಿಸಿದ್ದ ಇಫ್ಕೋ ನ್ಯಾನೋ ಯೂರಿಯಾ ಹಾಗೂ ನ್ಯಾನೋ ಡಿಎಪಿ ಸಿಂಪರಣೆ ಮಾಡಿದ ಭತ್ತದ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ನ್ಯಾನೋ ಯೂರಿಯಾ ಹಾಗೂ ನ್ಯಾನೋ ಡಿಎಪಿಗಳನ್ನು ಉಪಯೋಗಿಸುವುದರಿಂದ ಕಡಿಮೆ ಖರ್ಚಿನಲ್ಲಿ ಉತ್ತಮ ಬೆಳೆ ಪಡೆಯಬಹುದು. ಬೇರೆ ಯೂರಿಯಾ ಗೊಬ್ಬರ ಬಳಕೆಯಿಂದ ಆರ್ಥಿಕ ಹೊರೆಯಾಗುತ್ತಿದೆ ಎಂದರು.

ಇಫ್ಕೋ ಕ್ಷೇತ್ರಾಧಿಕಾರಿ ಗೋವಿಂದರಾಜ ಮಾತನಾಡಿ, ಇಫ್ಕೋ ರೈತರ ಸಹಕಾರ ಸಂಸ್ಥೆಯಾಗಿದ್ದು, ಎಲ್ಲ ಬೆಳೆಗಳಿಗೆ ಉಪಯೋಗಿಸಲು ಯೋಗ್ಯವಾದ ನ್ಯಾನೋ ಯೂರಿಯಾ ಹಾಗೂ ನ್ಯಾನೋ ಡಿಎಪಿಗಳನ್ನು ಸಿದ್ಧಪಡಿಸಲಾಗಿದೆ ಎಂದರು.

ದಢೇಸುಗೂರು ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ರಮೇಶ, ಸಾಲಗುಂದ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಾಕೀರ್ ಹುಸೇನ್, ಸಂಘದ ಸಿಇಒ ವಿರೂಪಾಕ್ಷಪ್ಪ ಕೆಂಗಲ್, ಕೃಷಿ ವಿಜ್ಞಾನಿಗಳಾದ ಡಾ.ಅಜಿತ್ ಕುಮಾರ್, ಡಾ.ಗುರುಪ್ರಸಾದ್, ಡಾ.ಶ್ರೀನಿವಾಸ ಇದ್ದರು.