ಬಂಟ್ವಾಳ: ನಂದಾವರ ಚಿಕ್ಕ ಮೇಳ ತಂಡ ಮಳೆಗಾಲದ ಐದನೇ ವರ್ಷದ ತಿರುಗಾಟ ಆರಂಭಿಸಿದೆ.
ಮನೆ ಮನೆಗೆ ಯಕ್ಷಗಾನ ಕಾರ್ಯಕ್ರಮಕ್ಕೆ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬ ಕ್ಷೇತ್ರದಲ್ಲಿ ಗೆಜ್ಜೆಪೂಜೆ, ಪ್ರಥಮ ಸೇವೆ ಆಟದೊಂದಿಗೆ ಈ ವರ್ಷದ ಚಿಕ್ಕ ಮೇಳಕ್ಕೆ ಚಾಲನೆ ನೀಡಲಾಯಿತು.
ಸಜೀಪ ಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್, ಅರ್ಚಕ ಉದಯ ಭಟ್, ಕೆಲಿಂಜ ಶ್ರೀ ಉಳ್ಳಾಲ್ತಿ ದೈವಸ್ಥಾನ ಆಡಳಿತ ಮೊಕ್ತೇಸರ ಪುಂಡಿಕಾ ಶಂಕರನಾರಾಯಣ ಭಟ್, ಶ್ರೀ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಅರುಣ್ ಕುಮಾರ್, ಕೆ.ಮೋಹನ ದಾಸ್ ಹೆಗ್ಡೆ, ಕೆ.ಮ್ಯಾನೇಜರ್ ರಾಮಕೃಷ್ಣ, ರಮೇಶ್ ಕುಮಾರ್, ಸೋಮನಾಥ, ಚಿಕ್ಕಮೇಳದ ಸಂಚಾಲಕ ಭಾಸ್ಕರ್ ಸರಪಾಡಿ, ಕಲಾವಿದರಾದ ಶಿವಪ್ರಸಾದ್ ಕಾವಳಕಟ್ಟೆ, ಕಾರ್ತಿಕ್ ಶರಪಾಡಿ, ಸಂದೀಪ್ ಕುಲಾಲ್, ಶಿವಪ್ರಸಾದ್ ಕುರಾಯ, ಶಿವಪ್ರಸಾದ್ ಆಚಾರ್ಯ, ಧನಂಜಯ ಸರಪಾಡಿ ಉಪಸ್ಥಿತರಿದ್ದರು.