ಬೆಂಗಳೂರು: ವಿಸ್ತರಿತ ಬೈಯಪ್ಪನಹಳ್ಳಿ-ಕೆ.ಆರ್. ಪುರ ನೇರಳೆ ಮಾರ್ಗದಲ್ಲಿ ಮೆಟ್ರೋ ರೈಲಿನ ಪ್ರಾಯೋಗಿಕ ಸಂಚಾರ ಮುಂದುವರೆದಿದ್ದು, ಈ ತಿಂಗಳ ಅಂತ್ಯದವರೆಗೆ ನಡೆಯಲಿದೆ.
ಮೆಟ್ರೋ ರೈಲು ಎಷ್ಟು ಪ್ರಯಾಣದಲ್ಲಿ ಪ್ರಯಾಣಿಕರ ತೂಕ ಹೊರುವ ಸಾಮರ್ಥ್ಯ ಹೊಂದಿದೆ ಎಂಬುದನ್ನು ತಿಳಿದುಕೊಳ್ಳಲು ಬೈಯಪ್ಪನಹಳ್ಳಿ-ಬೆನ್ನಿಗಾನಹಳ್ಳಿ ಮಧ್ಯೆ ಪರೀಕ್ಷೆ ನಡೆಸಲಾಗಿದೆ. ಕಳೆದ 10ರಂದು ಮೊದಲ ಬಾರಿಗೆ ಪ್ರಾಯೋಗಿಕ ಪರೀಕ್ಷೆ ನಡೆದಿತ್ತು. ಆ ಬಳಿಕ ಬಿಎಂಆರ್ಸಿಎಲ್ ವಿವಿಧ ಹಂತಗಳಲ್ಲಿ ಪರೀಕ್ಷೆಯನ್ನು ಮುಂದುವರಿಸಿದೆ.
ರೈಲಿನ ಆರು ಬೋಗಿಗಳಲ್ಲಿ ಮರಳಿನ ಚೀಲಗಳನ್ನಿಟ್ಟು (ಶೇ.100 ಪ್ರಯಾಣಿಕರ ತೂಕ) ಎರಡೂ ಟ್ರಾ$್ಯಕ್ನಲ್ಲಿ ಪ್ರಾಯೋಗಿಕ ಸಂಚಾರ ಕೈಗೊಳ್ಳಲಾಗಿದೆ. ಇದರಿಂದ ಗರ್ಡರ್ನ ಮೇಲಾಗುವ ಪರಿಣಾಮ, ಗರ್ಡರ್ಗೆ ಮೆಟ್ರೋ ರೈಲು ಸಂಚಾರದ ಮೇಲೆ ಪ್ರಯಾಣಿಕರ ತೂಕವನ್ನು ತಡೆದುಕೊಳ್ಳುವ ಸಾಮರ್ಥ್ಯ ಸಾಬೀತು ಮಾಡುವುದನ್ನು ಖಾತರಿಪಡಿಸಿಕೊಳ್ಳಲಾಗುತ್ತದೆ.
ಕಳೆದ ಫೆಬ್ರವರಿಯಲ್ಲಿ ಓಪನ್ ವೆಬ್ ಗರ್ಡರ್ ಅಳವಡಿಸಲಾಗಿದ್ದು, ಇದೀಗ ಬೋಗಿಗಳಲ್ಲಿ ಮರಳಿನ ಚೀಲಗಳನ್ನು ತುಂಬಿ ಸಾಮರ್ಥ್ಯ ಪರೀಸಲಾಗುತ್ತಿದೆ. ಗಮನಾರ್ಹವಾದ ಸಮಸ್ಯೆಗಳು ಕಂಡು ಬಂದಿಲ್ಲ. ಇಂಜಿನಿಯರಿಂಗ್ ವಿಭಾಗದ ಸೂಚನೆಯಂತೆ ಅಗತ್ಯವಿರುವ ಬದಲಾವಣೆಗಳನ್ನು ಮಾಡಿಕೊಳ್ಳಲಾಗುವುದು ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ನಮ್ಮ ಮೆಟ್ರೋ ಬೈಯಪ್ಪನಹಳ್ಳಿ-ಕೃಷ್ಣರಾಜಪುರ ಮಾರ್ಗ ಹಾಗೂ ಕೆಂಗೇರಿ&ಚಲ್ಲಟ್ಟ ವಿಸ್ತರಣೆ ಮಾರ್ಗ ಸೆಪ್ಟೆಂಬರ್ನಲ್ಲಿ ಕಾರ್ಯಾಚರಿಸುವ ಸಾಧ್ಯತೆ ಇದೆ. ನಾಗಸಂದ್ರ-ಮಾದಾವರ ಮಾರ್ಗ ವಿಸ್ತರಣೆ ಹಾಗೂ ಆರ್.ವಿ. ರಸ್ತೆ-ಬೊಮ್ಮನಹಳ್ಳಿ ಹೊಸ ಮಾರ್ಗದ ಕಾರ್ಯಚರಣೆ ಡಿಸೆಂಬರ್ನಲ್ಲಿ ಪ್ರಾರಂಭಿಸುತ್ತದೆ.