ಹನುಮಸಾಗರ: ಪಟ್ಟಣ ಸೇರಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಾಗಪಂಚಮಿ ನಿಮಿತ್ತ ಮಹಿಳೆಯರು ದೇವಸ್ಥಾನಗಳಲ್ಲಿ ಸ್ಥಾಪಿಸಿರುವ ನಾಗಪ್ಪನ ಮೂರ್ತಿಗಳಿಗೆ ಹಾಲೆರೆದರು.
ಪಟ್ಟಣದ ಅಂಬಾಭವಾನಿ ದೇವಸ್ಥಾನದ, ಕರಿಸಿದ್ದೇಶ್ವರ ಮಠ, ರಾಘವೇಂದ್ರಮಠ, ಆಶ್ರಯ ಕಾಲನಿಯ ಆಂಜನೇಯ ದೇವಸ್ಥಾನ ಸೇರಿ ವಿವಿಧ ದೇವಸ್ಥಾನಗಳಲ್ಲಿ ಸ್ಥಾಪಿಸಿರುವ ನಾಗದೇವರಿಗೆ ಹಾಲಿನ ಅಭಿಷೇಕ ಮಾಡಲಾಯಿತು.
ಇದನ್ನೂ ಓದಿ: ಪೌಷ್ಟಿಕ ಆಹಾರವಾದ ಹಾಲು ವ್ಯರ್ಥವಾಗದಿರಲಿ
ಮಹಿಳೆಯರು ವಿವಿಧ ಬಗೆಯ ಸಿಹಿ ಉಂಡಿಗಳನ್ನು ಸಿದ್ಧಪಡಿಸಿ ದೇವರಿಗೆ ಸಮರ್ಪಿಸಿದರು. ಗ್ರಾಮಗಳಿಗೆ ತೆರಳದೆ ಕಸ್ತೂರಬಾ ಗಾಂಧಿ ವಸತಿ ನಿಲಯದ ವಿದ್ಯಾರ್ಥಿನಿಯರು ನಾಗರ ಪಂಚಮಿ ಆಚರಿಸಿದರು. ವಸತಿ ನಿಲಯದಲ್ಲಿ ವಿವಿಧ ಸಿಹಿ ಖಾದ್ಯಗಳನ್ನು ತಯಾರಿಸಿ ಸವಿದರು.