ಕಾರಟಗಿ: ನೂತನವಾಗಿ ರಚನೆಯಾದ ಡಾ.ಸಿದ್ದಯ್ಯ ಪುರಾಣಿಕ್ ಟ್ರಸ್ಟ್‌ನ ಸದಸ್ಯರಾಗಿ ಆಯ್ಕೆಯಾದ ಉಪನ್ಯಾಸಕ ಡಾ. ಹನುಮಂತಪ್ಪ ಚಂದಲಾಪುರ, ಸಾಹಿತಿ ರಮೇಶ ಬನ್ನಿಕೊಪ್ಪ ಹಾಗೂ ಇತ್ತೀಚೆಗೆ ನಿವೃತ್ತರಾದ ಪ್ರಾಚಾರ್ಯ ಜಿ.ಅನಿಲಕುಮಾರ್ ಅವರನ್ನು ಕಸಾಪ ತಾಲೂಕು ಘಟಕದಿಂದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಮಂಗಳವಾರ ಸನ್ಮಾನಿಸಲಾಯಿತು.
ಟ್ರಸ್ಟ್ ನೂತನ ಸದಸ್ಯ ಡಾ.ಹನುಮಂತಪ್ಪ ಚಂದಲಾಪುರ ಮಾತನಾಡಿ, ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಸಿದ್ದಯ್ಯ ಪುರಾಣಿಕರದು ವಿಶಿಷ್ಟ ಸಾಧನೆಯಾಗಿದ್ದು, ಆಡಳಿತಗಾರನಾಗಿ ಕನ್ನಡ ಕಟ್ಟುವ ಕೆಲಸಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವ ಜತೆಗೆ ವೈವಿಧ್ಯಮಯ ಸಾಹಿತ್ಯ ರಚಿಸಿ ಸ್ಮರಣೀಯರಾಗಿದ್ದಾರೆ. ದಕ್ಷ ಸೇವೆಯೊಂದಿಗೆ ನಾಡು-ನುಡಿ ಅಭಿವೃದ್ಧಿಗೆ ಅನನ್ಯ ಸೇವೆ ಸಲ್ಲಿಸಿದರು. ಏನಾದರೂ ಆಗು ಮೊದಲು ಮಾನವನಾಗು ಎನ್ನುವ ಪುರಾಣಿಕರ ಮಾತು ಮನುಷ್ಯತ್ವದ ಚಿಂತನೆ ಎತ್ತಿ ಹಿಡಿಯುತ್ತದೆ ಎಂದರು.
ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಬಸವರಾಜ ರ‌್ಯಾವಳದ, ಪ್ರಾ.ಶಾ.ಶಿ.ಸಂಘದ ರಾಜ್ಯ ಉಪಾಧ್ಯಕ್ಷ ಚನ್ನಬಸಪ್ಪ ವಕ್ಕಳದ, ತಾಲೂಕಾಧ್ಯಕ್ಷ ವಿಠ್ಠಲ್ ಜೀರಗಾಳಿ, ಕಸಾಪ ತಾಲೂಕಾಧ್ಯಕ್ಷ ಶರಣಪ್ಪ ಕೋಟ್ಯಾಳ, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಚಿಕೇನಕೊಪ್ಪ, ಪ್ರಮುಖರಾದ ರಾಚೋಟೆಪ್ಪ, ಶರಣಪ್ಪ ಕಾಯಿಗಡ್ಡೆ ಇತರರಿದ್ದರು.