ಜಿಲ್ಲೆ

'ಕರೊನಾ ವೈರಸ್​ 3ನೇ ಅಲೆ ಮಾತ್ರವಲ್ಲ 5 ರಿಂದ 7 ಅಲೆಗಳು ಬರಲಿದೆ'

ರಮೇಶ್​ ಕುಮಾರ್​​ ಬಿ ಎಡಮೋಳೆ

ಮೈಸೂರು: ಮಹಾಮಾರಿ ಕರೊನಾ ವೈರಸ್​ 3ನೇ ಅಲೆ ಮಾತ್ರವಲ್ಲ 5 ರಿಂದ 7 ಅಲೆಗಳು ಬರಲಿದೆ ಎಂದು ನಂಜನಗೂಡು ಶಾಸಕ ಹರ್ಷವರ್ಧನ್​ ಆತಂಕ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶೀಘ್ರದಲ್ಲಿ ಲಸಿಕೆ ನೀಡುವಿಕೆ ಹಾಗೂ ಆಕ್ಸಿಜನ್ ಘಟಕ ನಿರ್ಮಾಣಕ್ಕೆ ಒತ್ತು ನೀಡಿ. ಲಸಿಕೆ ಸಿಗದ ಕಾರಣ ಜನ ಆತಂಕಕ್ಕೆ ಸಿಲುಕಿದ್ದಾರೆ. ನಂಜನಗೂಡಿನಲ್ಲಿ ಲಸಿಕೆ ನೀಡುವಿಕೆಯಲ್ಲಿ ಸರ್ಕಾರ ವಿಫಲವಾಗಿದೆ ಎಂದು ಹೇಳಿದರು.

ಕರೊನಾ ಕೇವಲ 3 ಅಲೆಗೆ ನಿಲ್ಲಲ್ಲ. ಈಗಾಗಲೇ ಮಕ್ಕಳ ಮೇಲೆ ಪರಿಣಾಮ ಬೀರಿದೆ. ಮಕ್ಕಳಲ್ಲಿ ಇಮ್ಯೂನಿಟಿ ಇರುವುದರಿಂದ ಚೇತರಿಸಿಕೊಂಡಿದ್ದಾರೆ. ಈ ವರ್ಷದಲ್ಲಿ ಶೇ 65 ರಷ್ಟು ಮಂದಿಗೆ ಲಸಿಕೆ ನೀಡಬೇಕಿತ್ತು. ಮಳೆಗಾಲ ಬರುವುದರಿಂದ ಮಕ್ಕಳಲ್ಲಿ ಅಸ್ತಮ ಕಾಣಿಸಿಕೊಳ್ಳುವ ಭೀತಿ ಎದುರಾಗಿದೆ ಎಂದರು.

ವ್ಯಾಕ್ಸಿನೇಷನ್ ತರಿಸಿಕೊಳ್ಳಲು ಸರ್ಕಾರ ಹೆಚ್ಚು ಒತ್ತು ನೀಡಬೇಕಿದೆ. ಸಂಬಂಧಪಟ್ಟ ಕಂಪನಿಗಳ ಜತೆ ಮಾತುಕತೆ ನಡೆಸಿ ಕಾರ್ಯರೂಪಕ್ಕೆ ತರಬೇಕಿದೆ. ವ್ಯಾಕ್ಸಿನೇಷನ್ ಪೂರೈಕೆಗೆ ಒತ್ತು ನೀಡಿ ಜತೆಗೆ ಆಕ್ಸಿಜನ್ ಪ್ಲಾಂಟ್ ಪ್ರಾರಂಭಿಸಬೇಕು ಎಂದು ಹೇಳುತ್ತಾ ತಮ್ಮ ಸರ್ಕಾರದ ವಿರುದ್ಧವೇ ಶಾಸಕ ಹರ್ಷವರ್ಧನ್ ಅಸಮಾಧಾನ ಹೊರಹಾಕಿದರು. (ದಿಗ್ವಿಜಯ ನ್ಯೂಸ್​)