ಮೈಸೂರು: ಮದ್ಯ ಮಾರಾಟ ಪ್ರಕ್ರಿಯೆ ರಾಜ್ಯದೆಲ್ಲೆಡೆ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಸೋಮವಾರ ಆರಂಭವಾಗಿದೆ. ಇದರಂತೆ, ಕೆಂಪು ವಲಯ ಮೈಸೂರಿನಲ್ಲೂ ಇಂದಿನಿಂದ ಮದ್ಯ ಮಾರಾಟ ಆರಂಭವಾಗಿದೆ. ಮದ್ಯ ಖರೀದಿಗೆ ಮೈಸೂರಿನಲ್ಲಿ ಮದ್ಯ ಪ್ರಿಯರು ಸಾಲುಗಟ್ಟಿದ್ದಾರೆ. ಕೆಲವು ಕಡೆ ಸಾಮಾಜಿಕ ಅಂತರ ಪಾಲಿಸಬೇಕೆಂಬ ನಿಯಮದ ಬಗ್ಗೆಯೂ ಅವರ ಗಮನಹರಿಯಲಿಲ್ಲ!
ಒಮ್ಮೆಲೆ ವೈನ್ ಸ್ಟೋರ್ ಮುಂದೆ ಜಮಾಯಿಸಿದ ಮದ್ಯಪ್ರಿಯರಿಗೆ ಮದ್ಯದ ಹೊರತು ಬೇರೇನೂ ಕಾಣಿಸುತ್ತಿರಲಿಲ್ಲ. ಸಾಮಾಜಿಕ ಅಂತರವೂ ಇಲ್ಲದೇ ತಾಮುಂದು, ನಾಮುಂದು ಎಂದು ಕ್ಯೂ ನಿಂತಿದ್ದರು. ಜನತಾ ನಗರದ ಆರ್ ಆರ್ ವೈನ್ ಸ್ಟೋರ್ ಬಳಿ ಇಂತಹ ಘಟನೆ ನಡೆದಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮಾಲೀಕರು ಮತ್ತು ಅಲ್ಲಿದ್ದವರು ಎಚ್ಚರಿಸಿದ್ದು ಕಂಡುಬಂತು.
ಅಂತಿಮವಾಗಿ ವೈನ್ ಸ್ಟೋರ್ ಸಿಬ್ಬಂದಿ 3 ಅಡಿ ಅಂತರಕ್ಕೆ ನಿಲ್ಲಿಸಿ ಮದ್ಯಕೊಡುವ ವ್ಯವಸ್ಥೆಯನ್ನು ಮಾಡಿದ್ದರು. ಮದ್ಯಮಾರಾಟಕ್ಕೆ ಕೆಲವು ನಿಬಂಧನೆಗಳನ್ನು ವಿಧಿಸಲಾಗಿದ್ದು, ಇದರ ಜತೆಗೆ ಕೋವಿಡ್ ನಿಯಮ ಉಲ್ಲಂಘನೆಯಾಗದಂತೆ ಎಚ್ಚರವಹಿಸಬೇಕು ಎಂದು ಮದ್ಯದಂಗಡಿ ಮಾಲೀಕರಿಗೆ ಜಿಲ್ಲಾಡಳಿತ ಎಚ್ಚರಿಕೆಯನ್ನೂ ನೀಡಿದೆ.

ಲಾಕ್ಡೌನ್ನ 41 ದಿನಗಳ ನಂತರ ಮದ್ಯದಂಗಡಿ ಓಪನ್ ಆಗಿರುವ ಕಾರಣ ಮೈಸೂರಿನಲ್ಲಿ ಮದ್ಯದ ಅಂಗಡಿ ತೆರೆಯುವ ಮುನ್ನ ಮಾಲೀಕರೊಬ್ಬರು ಪೂಜೆ ಸಲ್ಲಿಸಿದ್ರು. ಚಾಮರಾಜ ಮೊಹಲ್ಲಾದ ಮದ್ಯದ ಅಂಗಡಿಗೆ ಈ ರೀತಿ ಪೂಜೆ ಮಾಡಲಾಗಿದ್ದು, ಬಾಳೆ ಹಣ್ಣು, ಹೂವು, ಕಾಯಿ, ಎಲೆ ಅಡಿಕೆ, ಕರ್ಪೂರ, ಅರಿಶಿನ ಕುಂಕುಮ ಇಟ್ಟು ಪೂಜೆ. ಕಡ್ಲೆ ಪುರಿ, ಪೇಡ ಸಿಹಿ ವಿತರಿಸಿ ನಂತರ ಮದ್ಯದ ಅಂಗಡಿ ತೆರೆದು ಸಂಭ್ರಮಿಸಿದ್ರು. ಈಡುಗಾಯಿ ಹೊಡೆದು ಮದ್ಯದ ಅಂಗಡಿಗೆ ಪ್ರವೇಶ ಮಾಡಿದ್ದು ವಿಶೇಷ.