ಹರಪನಹಳ್ಳಿ: ಹಲವು ವಿದ್ಯೆಗಳಲ್ಲಿ ಸಂಗೀತ ಅತಿ ವಿಶಿಷ್ಟವಾದ ಕಲೆಯಾಗಿದೆ. ಮನುಷ್ಯನ ಪ್ರತಿನಿತ್ಯದ ಕಾರ್ಯಗಳಲ್ಲಿ ಉಲ್ಲಾಸಭರಿತವಾಗಿ ಇರುವಂತೆ ಮಾಡುತ್ತದೆ ಎಂದು ಹಲುವಾಗಲು ಮುರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಚಾರ್ಯ ಕೆ.ಶಶಿಧರ್ ಹೇಳಿದರು.
ಇದನ್ನೂ ಓದಿ:ಸಂಗೀತ ಆಲಿಸಿದರೆ ನೆಮ್ಮದಿ ನೆಲೆಸುತ್ತದೆ
ತಾಲೂಕಿನ ಹಲುವಾಗಲು ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಸಂಜೆ ಸಂಗೀತ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯದಲ್ಲಿ ಪುಟ್ಟರಾಜ ಗವಾಯಿಗಳು ಅಂಧ ಮಕ್ಕಳ ಸಂಗೀತ ಶಾಲೆ ಅರಂಭಿಸಿ ಲಕ್ಷಾಂತರ ಮಕ್ಕಳ ಬಾಳಿಗೆ ಅಂತರಂಗದ ಬೆಳಕು ನೀಡಿದ್ದಾರೆ. ಮಕ್ಕಳು ವಿದ್ಯಾಭ್ಯಾಸದ ಜತೆ ಸಂಗೀತದ ಕಡೆಗೆ ಒಲವು ನೀಡಿದರೆ ಬದುಕು ಹಸನಾಗುತ್ತದೆ ಎಂದರು.