ಸಂಡೂರು ಸಮೀಪದ ಬೀಮತೀರ್ಥದ ಬಳಿಯ ಚಾರಣ ಪಥದಲ್ಲಿ ತ್ಯಾಜ್ಯ ಸಂಗ್ರಹಕ್ಕಾಗಿ ಎರಡು ಡಸ್ಟ್‌ಬಿನ್‌ಗಳನ್ನು ಅರಣ್ಯ ಇಲಾಖೆಗೆ ಕೊಡುಗೆಯಾಗಿ ಜೀವನ್ ಸಂಗೀತ ಸಂಸ್ಥೆ ನೀಡಿತು. ಉಪವಲಯ ಅರಣ್ಯಾಧಿಕಾರಿ ರಾಘವೇಂದ್ರ, ಮೆಹಬೂಬ್ ಬಾಷಾ, ಜೀವನ್ ಸಂಗೀತ ಸಂಸ್ಥೆ ಅಧ್ಯಕ್ಷೆ ಗೀತಾ ವಿರೇಶ್ ಇತರರಿದ್ದರು. 
ಜಿಲ್ಲೆ

ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಎಸೆಯದಿರಿ

ಪ್ರವೀಣ ಉದುಸಾ ದಲಬಂಜನ್

ಸಂಡೂರು: ಪರಿಸರವನ್ನು ಸ್ವಚ್ಛತೆಯಿಂದ ಕಾಪಾಡಲು ಜನರು ಸಹಕರಿಸಬೇಕು ಎಂದು ಸಂಗೀತ್ ಸಂಸ್ಥೆ ಅಧ್ಯಕ್ಷೆ ಗೀತಾ ವಿರೇಶ್ ಹೇಳಿದರು.
ಸಮೀಪದ ಬೀಮತೀರ್ಥದ ಬಳಿಯ ಚಾರಣ ಪಥದಲ್ಲಿ ಜೀವನ್ ಸಂಗೀತ್ ಸಂಸ್ಥೆ ಹಾಗೂ ಬಳ್ಳಾರಿ ಬೆಸ್ಟ್ ಶಾಲೆಯ ಎನ್‌ಸಿಸಿ ಕೆಡೆಟ್‌ಗಳಿಂದ ಹಮ್ಮಿಕೊಂಡಿದ್ದ ಸ್ವಚ್ಚತಾ ಅಭಿಯಾನದಲ್ಲಿ ಮಂಗಳವಾರ ಮಾತನಾಡಿದರು. ಚಾರಣ ವೀಕ್ಷಿಸಲು ಆಗಮಿಸುವವರು ನೀರಿನ, ಜ್ಯೂಸ್ ಬಾಟಲ್ ಹಾಗೂ ಪ್ಲಾಸ್ಟಿಕ್ ವಸ್ತುಗಳನ್ನು ಎಸೆಯಬಾರದು ಎಂದು ಮನವಿ ಮಾಡಿದರು.

ಪರಿಸರವನ್ನು ಸ್ವಚ್ಛತೆಯಿಂದ ಕಾಪಾಡಿ

ಉಪವಲಯ ಅರಣ್ಯಾಧಿಕಾರಿ ರಾಘವೇಂದ್ರ ಮಾತನಾಡಿ, ಚಾರಣ ಪಥಗಳನ್ನು ಸ್ವಚ್ಛವಾಗಿಡಬೇಕು. ಅಲ್ಲದೆ ಮರ, ಗಿಡಗಳನ್ನು ಕಡಿಯಬಾರದು. ಅರಣ್ಯ ನಾಶದಿಂದ ಮಳೆ ಈಗಾಗಲೇ ಬಾರದಂತಾಗಿದೆ. ಪರಿಸರ ನಾಶ ಮಾಡುವುದರಿಂದ ಅತಿವೃಷ್ಟಿ ಅಥವಾ ಅನಾವೃಷ್ಟಿ ಯಾಗಲಿದೆ ಎಂದರು.
ಬೆಸ್ಟ್ ಶಾಲೆಯ ಎನ್‌ಸಿಸಿ ಅಧಿಕಾರಿ ಕಿರಣ್, ಅರಣ್ಯ ಇಲಾಖೆ ಸಿಬ್ಬಂದಿ ಮೆಹಬೂಬ್ ಬಾಷಾ, ಜೀವನ್ ಸಂಗೀತ್ ಸಂಸ್ಥೆಯ ಪದಾಧಿಕಾರಿಗಳು, ವಿದ್ಯಾರ್ಥಿಗಳಿದ್ದರು.