ಜಿಲ್ಲೆ

ಪತ್ನಿಯ ಕತ್ತು ಹಿಸುಕಿ ಕೊಂದ ಪತಿ

Uttara Kannada - Subash Hegde

ಹಳಿಯಾಳ: ಪತ್ನಿಯನ್ನು ಆಕೆಯ ಪತಿಯೇ ಕತ್ತು ಹಿಸುಕಿ ಕೊಲೆ‌‌ ಮಾಡಿರುವ ಘಟನೆ ತಾಲೂಕಿನ‌ ಅರ್ಲವಾಡ ಗ್ರಾಮದಲ್ಲಿ ಗುರುವಾರ ನಡೆದಿದೆ.

ಚೆನ್ನಮ್ಮಾ ಮನೋಹರ ಸುತಾರ(33) ಕೊಲೆಯಾದ ಮಹಿಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಳಿಯಾಳ ಪೊಲೀಸರು ಪತಿ ಮನೋಹರ ಸುತಾರ ಹಾಗೂ ಅತ್ತೆ ಪದ್ಮಾವತಿಯನ್ನು ಹಳಿಯಾಳ ಪೋಲಿಸರು ಬಂಧಿಸಿದ್ದಾರೆ.

ಧಾರವಾಡ ಜಿಲ್ಲೆ ಅಳ್ನಾವರ ತಾಲೂಕಿನ ಅಂಬೊಳ್ಳಿ ಗ್ರಾಮದ ಈಕೆಯನ್ನು ಮನೋಹರ ಸುತಾರ 14 ವರ್ಷಗಳ ಹಿಂದೆ ಮದುವೆಯಾಗಿದ್ದ. ದಂಪತಿಗೆ ಮೂವರು ಮಕ್ಕಳಿದ್ದರು.

ಮೃತಳ ತಂದೆ ಹನುಂತ ಮಟ್ಟಿ ಹಳಿಯಾಳ ಠಾಣೆಯಲ್ಲಿ ದೂರು ನೀಡಿದ್ದಾರೆ. ಮಹೋಹರ ಹಾಗೂ ಆತನ ತಾಯಿ ಪದ್ಮಾವತಿ ಇಬ್ಬರು ತನ್ನ ಮಗಳು ಚೆನ್ನಮ್ಮಾ ಮದುವೆಯಾಗಿ ಹೊದಾಗಿನಿಂದಲೂ ಮಾನಸಿಕ, ದೈಹಿಕ ಕಿರುಕುಳ ನೀಡುತ್ತ ಬಂದಿದ್ದಾರೆ. ಈಗ ಪತಿ ಮನೋಹರ ಚೆನ್ನಮ್ಮಾಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಎಸ್‌ಪಿ ಎನ್‌.ವಿಷ್ಣುವರ್ಧನ, ಡಿವೈಎಸ್‌ಪಿ ಶಿವಾನಂದ ಕಟಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.