ಜಿಲ್ಲೆ

ಯಲ್ಲಾಪುರದಲ್ಲಿ ಭೀಕರ ಕೊಲೆ !!

Uttara Kannada - Subash Hegde

ಯಲ್ಲಾಪುರ: ತಾಲೂಕಿನ ಹುಣಶೆಟ್ಟಿಕೊಪ್ಪ ಜಾತ್ರೆಯಲ್ಲಿ ಯುವಕನೊಬ್ಬನ ಕೊಲೆಯಾಗಿದೆ.

ಹಳಿಯಾಳ ತಾಲೂಕಿನ ಸಾಂಬ್ರಾಣಿಯ ಪ್ರಜ್ವಲ್ ಕಕ್ಕೇರಿಕರ್ (24)ಕೊಲೆಯಾದ ಯುವಕ. ಜಾತ್ರೆಗೆ ಬಂದ ವೇಳೆ ಬೈಕ್ ಓವರ್ ಟೇಕ್ ಮಾಡುವ ವಿಷಯದಲ್ಲಿ ಗಲಾಟೆಯಾಗಿದ್ದು, ಸಾಣಾ ಮರಾಠಿ, ಪಾಂಡು ಮರಾಠಿ, ನಾಗೇಶ ಪಾಟೀಲ ಎಂಬವರು ಪ್ರಜ್ವಲ್ ಗೆ ಥಳಿಸಿ ಕೊಲೆ ಮಾಡಿದ್ದಾರೆ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.