ಜಿಲ್ಲೆ

ಪುರಸಭೆ ಸದಸ್ಯನ ಮೇಲೆ ಮಚ್ಚಿನಿಂದ ಹಲ್ಲೆ

Kopala - Desk - Eraveni

ಸಂಡೂರು: ತೋರಣಗಲ್ ರೈಲ್ವೆ ನಿಲ್ದಾಣದ ಘೋರ್ಪಡೆ ನಗರದ ಎಚ್‌ಎಲ್ ಕಾಲುವೆ ಬಳಿ ಪುರಸಭೆ ಸದಸ್ಯ ನಾಗರಾಜ ನಾಯ್ಕ (32) ಮೇಲೆ ಶಿವಕುಮಾರ್ ಎಂಬುವರು ಭಾನುವಾರ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ.

ನಾಗರಾಜ ಬೆನ್ನು ಮತ್ತು ಕೈಗಳಿಗೆ ಗಂಭೀರ ಗಾಯಗಳಾಗಿದ್ದು ಜಿಂದಾಲ್ ಸಂಜೀವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಬಳ್ಳಾರಿ ವಿಮ್ಸ್‌ಗೆ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ತೋರಣಗಲ್ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಆಗಿದ್ದೇನು?: ವಾರ್ಡ್‌ನಲ್ಲಿ ಚರಂಡಿ ವಿಚಾರವಾಗಿ ಪುರಸಭೆ ಸದಸ್ಯ ನಾಗರಾಜ ನಾಯ್ಕ ಹಾಗೂ ಶಿವಕುಮಾರ್ ನಡುವೆ ಜಗಳವಾಗಿತ್ತು. ಸ್ಥಳೀಯ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ. ಇದೇ ವಿಚಾರವಾಗಿ ಭಾನುವಾರ ಮಧ್ಯಾಹ್ನ ಕಾಲುವೆ ಬಳಿ ಇಬ್ಬರಿಗೂ ಜಗಳವಾಗಿದ್ದು, ಶಿವಕುಮಾರ್ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.