ಲಿಂಗಸುಗೂರು: ಮುಲ್ಲಾ ಅಭಿವೃದ್ಧಿ ನಿಗಮ ರಚನೆ ಮಾಡಲು ಒತ್ತಾಯಿಸಿ ಕರ್ನಾಟಕ ಮುಲ್ಲಾ ಅಸೋಸಿಯೇಶನ್ ನೇತೃತ್ವದಲ್ಲಿ ಪಟ್ಟಣದ ತಹಸಿಲ್ ಕಚೇರಿಯ ಶಿರಸ್ತೇದಾರ್ ಸೈಯದ್ ಮೋಯಿನುದ್ದೀನ್‌ಗೆ ಗುರುವಾರ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ 13 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದ ಪ್ರಮುಖ ಮುಲ್ಲಾ ಸಮುದಾಯವು ಇತಿಹಾಸ ಪರಂಪರೆಯಲ್ಲಿ ಮುಂಚೂಣಿ ವ್ಯವಸ್ಥಾಪಕ ಸ್ಥಾನ ಪಡೆದಿದೆ. ಮುಸ್ಲಿಂ ಸಮುದಾಯದ ಪ್ರಮುಖ ಕಾರ್ಯಗಳಲ್ಲಿ ಮುಂದಾಳತ್ವವಹಿಸಿದ್ದಾರೆ. ಅಲ್ಲದೆ ಬೇರೆ ಸಮುದಾಯಗಳ ಜತೆ ಸೌಹಾರ್ದಯುತವಾಗಿ ಸಾಗುವ ಮುಲ್ಲಾ ಸಮುದಾಯ ಕಡು ಬಡತನದಲ್ಲಿ ಉಚಿತ ಸೇವೆ ನೀಡುತ್ತಾ ಬರುತ್ತಿದೆ. ಸರ್ಕಾರ ಈ ಹಿಂದೆ ಪಿಂಚಣಿ ಇನಾಮ್ ಜಮೀನು ನೀಡಿ ಗೌರವಿಸಿತ್ತು. ಇದೀಗ ವಕ್ಫ್ ಆಸ್ತಿ ಎಂದು ಘೋಷಣೆ ಮಾಡಿರುವುದು ಸಮುದಾಯಕ್ಕೆ ಸಂರಕ್ಷಣೆ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಏನ್ ಗುರಾಯಿಸೋದು! ಮೈದಾನದಲ್ಲೇ ಕ್ರಿಕೆಟಿಗರ ಕಿತ್ತಾಟ, ಶ್ರೀಶಾಂತ್ ಆರೋಪಕ್ಕೆ ಗಂಭೀರ್ ನಗುವಿನ ಉತ್ತರ
ಗ್ರಾಮ, ನಗರಗಳಲ್ಲಿ ಆಚರಿಸುವ ಮೊಹರಂ ಹಬ್ಬಕ್ಕೆ ಸಹಾಯಧನ ಒದಗಿಸಬೇಕು. ಮೊಹರಂ ಹಬ್ಬದ ರೂವಾರಿಗಳು, ದರ್ಗಾದ ಮುತವಲ್ಲಿ ಅವರಿಗೆ ಮಾಸಿಕ ಪಿಂಚಣಿ ನೀಡಬೇಕು. ಮುಲ್ಲಾ ಸಮುದಾಯವನ್ನು ಪ್ರವರ್ಗ 1ನೇ ವರ್ಗಕ್ಕೆ ಸೇರಿಸಬೇಕು. ಬಡ ಕುಟುಂಬಗಳಿಗೆ ಸರ್ಕಾರಿ ನೌಕರಿ, ಸಾಮಾಜಿಕ, ಶೈಕ್ಷಣಿಕವಾಗಿ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಬೇಕೆಂದು ಒತ್ತಾಯಿಸಿದರು.